..
Audio by Vidwan Sumukh Moudgalyaಶ್ರೀ ಪುರಂದರದಾಸಾರ್ಯ ವಿರಚಿತ
ತಿರುವೆಂಗಳೇಶ ಮಹಿಮಾ ಸುಳಾದಿ
ರಾಗ : ಕಾಂಬೋಧಿ
ಧೃವತಾಳ
ಅಚ್ಯುತಾನಂತ ಗೋವಿಂದ ಶ್ರೀ ಮುಕುಂದ
ಸಚ್ಚಿದಾನಂದ ಸ್ವರೂಪ ಭಕ್ತ
ವತ್ಸಲ ಪುರುಷೋತ್ತಮ ಪರಂಧಾಮಾ
ಮತ್ಸ್ಯ ಕೂರ್ಮ ವರಾಹ ನಾರಸಿಂಹ
ವಾಮನ ಭಾರ್ಗವ ರಾಘವ ಕೃಷ್ಣ
ಬುದ್ಧಾವತಾರ ಕಲ್ಕಿ ನಾರಾಯಣ
ಅಪ್ಪಾರಮಹಿಮ ನಾರಾಯಣ
ಅನಂತ ಅವತಾರ ನಾರಾಯಾಣ
ಸರ್ಪಶಯನನೆ ನಾರಾಯಣ
ಸಿರಿ ಪುರಂದರವಿಠ್ಠಲ ವಿಭುವೆ
ತಿರುವೆಂಗಳಪ್ಪ ಎನ್ನಪ್ಪ
ಅಚ್ಯುತಾನಂತ ಗೋವಿಂದ ॥೧॥
ಮಟ್ಟತಾಳ
ಮಂಗಳ ವಕ್ಷದಲ್ಲಿ ಸಂಗ ಸುಖ ಇಪ್ಪಳವ್ವೆ
ಅಂಗನೆ ಲಕುಮೆವ್ವೆ ಭಂಗರವಾದಳವ್ವೆ
ಶೃಂಗರವಾದಳವ್ವೆ ಅಂಗನೆ ಲಕುಮೆವ್ವೆ
ರಂಗ ಪುರಂದರವಿಠ್ಠಲಗೆ ಭಂಗರವಾದಳವ್ವೆ
ಶೃಂಗರವಾದಳವ್ವೆ ॥೨॥
ತ್ರಿವಿಡಿತಾಳ
ಉಟ್ಟಿದ್ದ ದಟ್ಟಿಯು ಕಟ್ಟಿದ ಕಠಾರಿ
ತೊಟ್ಟಂಬು ತೋಲಾತ್ಮ ಮೆಟ್ಟಿದ್ದ ಮೆಟ್ಟು
ಕಟ್ಟಾಳು ಖಳರ ಕೆಂದೊಟ್ಟುವ ಕಡು ಧಿಟ್ಟ
ಸೃಷ್ಟಿಪಾ ಪುರಂದರವಿಠ್ಠಲರೇಯಾ ॥೩॥
ಅಟ್ಟತಾಳ
ಇದೆ ದನುಜ ಮರ್ದನ ಚಕ್ರಹಸ್ತ
ಇದೇ ವೇದಮಯ ಶಂಖಹಸ್ತ
ಇದೇ ಅಮೃತವ ನೀಡಿದ ಹಸ್ತ
ಇದೇ ತಿರುವೆಂಗಳಪ್ಪನ ಕುರುಹು
ಇದೇ ಪುರಂದರವಿಠ್ಠಲನ ಮೂರುತಿ ॥೪॥
ಆದಿತಾಳ
ಕಿರೀಟ ಕುಂಡಲಧರನ ಕಂಡೆ
ಸರಮಣಿಗಳ ಭೂಷಣನ್ನ ಕಂಡೆ
ಸಿರಿಯಿಪ್ಪ ವಕ್ಷಸ್ಥಳನ್ನ ಕಂಡೆ
ವರಪ್ರದನ ಕಂಡೆ ವರದೇಶನ ಕಂಡೆ
ತಿರುವೆಂಗಳಪ್ಪನ ಚರಣವ ಕಂಡೆ
ಪುರಂದರವಿಠ್ಠಲರೇಯನ ಕಂಡೆ ॥೫॥
ಜತೆ
ನೆಚ್ಚಿದಾಳುಗಳಿಗೆ ಅರೆಮೊರೆ ಇಲ್ಲದೆ
ಅಚ್ಚಭಾಗ್ಯ ಪುರಂದರವಿಠ್ಠಲ ತಿರುವೆಂಗಳಪ್ಪ ॥೬॥
****
No comments:
Post a Comment