Sunday, 1 August 2021

ರಾಮಚಂದ್ರನೆ ನಿನ್ನ ಪದಯುಗ ತಾಮರಸ ನೆರೆನಂಬಿದೆ ankita varadesha vittala

 ..

kruti by ವರದೇಶ ವಿಠಲರು varadesha vittala dasaru


ರಾಮಚಂದ್ರನೆ ನಿನ್ನ ಪದಯುಗ ತಾಮರಸ ನೆರೆನಂಬಿದೆ

ಸೋಮಶೇಖರ ಪೂಜಿತಾಂಘ್ರಿ ಮಹಾಮಹಿಮ

ಪೊರೆಯೆನ್ನನು ಪ


ಜನನ ಮರಣವಿದೂರ ನೀನಾಜನಪತಿಯ ತನುಜಾತನೆ

ಅನಿಮಿಷೇಶರಿಗೊಡೆಯನೆನಿಸಿದೆ 1


ಶ್ರೀರಮಣಿಯನಾದಿಕಾಲದಿ ನಾರಿಯನಿಪಳು ನಿನ್ನಗೆ

ಮಾರಹರಶರಮುರಿದು ಹರುಷದಿ ವಾರಿಜಾಕ್ಷೆಯ ವರಿಸಿದೆ 2


ಮೂಜಗತ್ಪತಿಯಂದಿಗೆಂದಿಗು ರಾಜ್ಯತೊಲಗಿದನೆನಿಸಿದೆ

ಈ ಜಗದೊಳಿಹ ಅಜ್ಞ್ಞಜನರಿಗೆ ಸೋಜಿಗವ ನೀತೋರಿದೆ 3


ಶ್ರೀಲಕುಮಿ ಪತೆ ನಿನ್ನ ಮಹಿಮಾ ಜಾಲದಿವಿಜರು ತಿಳಿಯರು

ನೀಲಮೇಘಶ್ಯಾಮ ಶಿಲೆಬಾಲೆ ಮಾಡಿದು ಚೋದ್ಯವೆ 4


ಮುತ್ತುರತ್ನ ಕಿರೀಟ ಶಿರದಲಿ ಇತ್ತಿಹ್ಯರ್ಕಶತÀಪ್ರಭಾ

ನೆತ್ತಿಯಲಿ ಜಡೆಧರಿಸಿ ವಲ್ಕಲ ಪೊತ್ತು ತಿರುಗುವುದುಚಿತವೇ 5


ಕುಜಭವ ಭವರರ್ಪಿಸಿದ ಎಡೆ ಭುಂಜಿಪುದು ನೀವಿರÀಲವೋ

ಅಂಜಿಕಿಲ್ಲದೆ ಭಿಲ್ಲಹೆಂಗಳೆಯಂಜಲವ ನೀ ಮೆದ್ದಿಯಾ 6


ಮಂಗಳಾಂಘ್ರಿಯ ಭಜಿಪಯೋಗಿ ಜನಂಗಳಿಗೆ ನೀನಿಲುಕದೆ

ಹಿಂಗದತಿ ವನವನವ ಚರಿಸುವ

ಮಂಗಗಳಿಗೆ ನೀನೊಲಿದಿಯಾ 7


ಹಾಟಕಾಂಬರ ತಾಟಕಾರಿ ವಿರಾಟ ಮೂರುತಿ ಎನ್ನಯ

ಕೋಟಲೆಯ ಕಡುತಾಪದಿಂಕಡೆದಾಟಿಸೆನ್ನನು ಜವದಲಿ 8


ಭಾರವಿಲ್ಲದೆ ಅಖಿಲಜಗಸಂಹಾರ ಮಾಡುವಿಯನುದಿನ

ಕ್ರೂರರಾವಣ ಮುಖ್ಯದನುಜರಹೀರಿ ಬಿಸುಟಿದು ಜೋದ್ಯವೆ 9


ಹರಿಯೆ ನಿನ್ನಯ ನಾವiಧ್ಯಾನದಿ ಹರನು

ಶಾಂತಿಯ ಪೆÇಂದಿದ

ಧರಿಯ ದನುಜರ ಮೋಹಿಸಲು ನೀ

ಹರನ ಪೂಜಿಯಗೈದಿಯಾ 10


ವಾರಿಜಾಭವ ಮುಖ್ಯದಿವಿಜರು ಪಾರುಗಾಣದೆ ಮಹಿಮನೆ

ಸಾರಿ ಭಜಿಸುವ ಭಕ್ತರಿಗೆ ಕೈವಾರಿಯಂದದಿ ತೋರುವಿ 11


ತಾಮಸರ ಸಂಗದಲಿ ನೊಂದೆನು ಕಾಮಕ್ರೋಧದಿ ಬೆಂದೆನು

ಈ ಮಹಿಗೆ ನಾಭಾರವಾದೆನು ಪ್ರೇಮದಿಂದಲಿ ಪಾಲಿಸು 12


ನಿನ್ನಧ್ಯಾನವ ತೊರೆದು ನಾಬಲು ಅನ್ಯವಿಷಯದಿ ರಮಿಸಿದೆ

ಎನ್ನ ದೋಷಗಳೆಣಿಸದಲೆ ಕಾರುಣ್ಯಸಾಗರ ಕರುಣಿಸು 13


ಹೀನ ವಿಷಯಾಪೇಕ್ಷೆ ಬಿಡಿಸಜ್ಞಾನತಿಮಿರವ ನೋಡಿಸು

ಮೌನಿ ಮಧ್ವಾರ್ಯರ ಮತದ ವಿಜ್ಞಾನ ತತ್ವವ ಬೋಧಿಸು 14


ಸಾಮಗಾನವಿಲೋಲ ರಘುಜನೆ ನೇಮದಿಂದಲಿನೀಯನ್ನ

ನಾಮವನೆ ಪಾಲಿಪುದು ಸಚಿದ್ಧಾಮ ವರದೇಶ ವಿಠಲನೆ15

***


No comments:

Post a Comment