..
kruti by ವರದೇಶ ವಿಠಲರು varadesha vittala dasaru
ಶ್ರೀ ರಘುದಾಂತರ ಚಾರುಚರಣಗಳು
ಸೇವಿಪರಘಗಳನು
ದೊರಗೈಸಿ ಕೃತಕೃತ್ಯನಾದೆನಾನು
ಭವಭಯವೆನಗೇನು ಪ
ಹೇಸಿಭವದಿ ಸುಖಲೇಶಕಾಣದಿರಲು
ಬೇಸರವಾಗಲು ದೇಶ ದೇಶದೋಳು ಬರುಪರಿಯರಿತಿರುಗಿ
ಮನದಲಿ ನಾ ಮರುಗಿ ಏಸುಯಾತ್ರೆಗಳ
ಚರಿಸಿ ತೋಷಬಡದೆ
ಸಂಚರಿಸುತ ನಡೆದೆ ಶ್ರೀಶನನುಗ್ರಹದಿವರಡಿಗಳ
ಪಡೆದೆ ಭವ ಬಂಧ ಕಡಿದೆ 1
ಹೀನಜನರ ಸಂಸರ್ಗದೋಷವನು ಕಲಿಮಲ ಕಲುಷವನು
ಕಾನನ ತೃಣವನು ಅನಳದಹಿಸುವಂತೆ
ದಹಿಪವು ಬಿಡು ಭ್ರಾಂತಿ
ನಾನಾತೀರ್ಥ ಕ್ಷೇತ್ರ ಯಾತ್ರೆಫಲವು ಒದಗಿಸಿಕೊಡುತಿಹವು
ಜ್ಞಾನಭಕುತಿವೈರಾಗ್ಯ ಕೊಡುತಲಿಹವು
ಗುರುಗಳ ಪದಯುಗವು 2
ಗುರುಪದರಜದ ಮಹಿಮೆಯ ಪರಿಮಿತವು ವರ್ಣಿಸಲಸದಳವು
ಶಿರದಿ ಧರಿಸೆಸಾರಿಸಕುಲಪಾವನವು ಎನಿಪುದು ನಿಶ್ಚಯವು
ಶರೀರಕೆ ಲೇಪಿಸೆ ಸಕಲವ್ಯಾಧಿ ಭಯವು ಪರಿಹರವಾಗುವವು
ನಿರುತಸೇವಿಸೆ ಮುಕುತಿಯೆ ಕರಗತವು ಅಹುದು ಶಾಶ್ವತವು 3
ಗುರುಪದಪೊಂದದೆ ಹರಿ ಕರುಣಿಸನೆಂದು
ತಿಳಿ ಮನಸಿಗೆ ತಂದು
ಹರಿಮುನಿದರು ಗರುಪೊರೆಯಲು ಸಮರ್ಥ
ಈ ನುಡಿ ಸಿದ್ಧಾಂತ
ಹರಿಯಂದದಿ ಗುರುಶರಣರ ಎಡೆಬಿಡದೆ
ಕರುಣಿಪ ಕೈಬಿಡದೆ
ಗುರುಚರಣಾಶ್ರಯಿಸಲು ಹರಿವಲಿಯುವನು
ಮನದಲಿ ಪೊಳೆಯುವನು 4
ನೇಮದಿ ಗುರುಪದ ಭಜಿಸಲು ಸಂಪದವು
ಸಂತತ ಲಭಿಸುವವು
ರಾಮನ ಪದಯುಗ್ಮಗಳಲಿ ಸದ್ರತಿಯು
ಪರಿಶುದ್ಧ ಭಕುತಿಯು
ತಾ ಮುದದಲಿ ವರದೇಶವಿಠಲಕೊಡುವ
ಬಡದಿರು ಸಂಶಯವ
ಪಾಮರ ನರಗುರು ಪದ ನಂಬದೆ ಕೆಡುವ
ಬಹುದುಃಖವ ಬಡುವ5
***
No comments:
Post a Comment