Sunday, 1 August 2021

ನಮೋ ನಮೋ ಶ್ರೀ ರಘುದಾಂತ ತೀರ್ಥ ankita varadesha vittala raghudanta teertha stutih

..

kruti by ವರದೇಶ ವಿಠಲರು varadesha vittala dasaru

ರಘುದಾಂತತೀರ್ಥರ ಸ್ತೋತ್ರ


ನಮೋ ನಮೋ ಶ್ರೀ ರಘುದಾಂತ ತೀರ್ಥ

ಮುನಿಯ ಮತಮಹಮಸಿರಿಯೆ

ಶಮದಮಾದಿಗುಣ ಪೂರ್ಣರಾಮಪದ

ಭ್ರಮರನೆನಿಪಗುರುವೆ ಪ


ಮಾರಮಣನಪದ ಸಾರಸಷಟ್ಟದ ಸೂರಿಸುಗುಣ ಭರಿತ

ಮಾರುತಮತ ಪಯವಾರಿಧಿ ಶಶಿ ಗಂಭೀರ ವಿಮಲ ಚರಿತ

ಆರಾಧಿಪರಘದೂರಗೈಸುತಿಹ ನೀರಜ ಶರವಿಜಿತ

ಶ್ರೀ ರಘುಪತಿ ತೀರ್ಥಾರ್ಯರ ಕರಸರಸೀರುಹಸಂಜನಿತ 1


ಆರ್ತಬಂಧು ಸತ್ಕೀರ್ತಿವಂತ ಸರ್ವೋತ್ತಮ ಹರಿಯನಿಪ

ಸೂತ್ರನಾಮಕ ಶಿಖಿನೇತ್ರ ಪ್ರಮುಖ ದೇವೋತ್ತಮನೆಂದೆನಿಪ

ಧಾತ್ರಿಯೊಳಗೆ ಸುಖತೀರ್ಥರೆ ಗುರುವೆಂದು

ಸ್ತೋತ್ರಗೈಯ್ಯುತಿಪ್ಪ

ಗಾತ್ರ ಮರೆದು ಶ್ರೀ ಪಾರ್ಥಸಖನಗುಣಕೀರ್ತಿಸಿ ಸುರಿಪ 2


ಪರಮತುರಗನಭಚರ ಪತಿಯೆನಿಸುವ ಕರುಣಿ ಕೋಪರಹಿತ

ಶರಣಾಗತಜನದುರಿತರಾಶಿಜಲ ಶರಧಿ ಕುಂಭಜಾತ

ಪರಮ ಭಾಗವತ ಸಿರಿಮುಖ ಕುಮುದಕೆ ಶರನಿಧಿ ಸಂಜಾತ

ಪರತತ್ವದಿ ಪರತರನೆನಿಸುವ ಮುನಿವರ ನಿರ್ಗತದುರಿತ 3


ಅನಘನಿನ್ನಪದವನಜÀಜದರಜವನು ವಿನಯದಿರಿಸಿ ಶಿರದಿ

ಜನುಮಜನುಮದಘತೃಣರಾಶಿಯ ಮಧ್ಯಗಳ ಪೊಕ್ಕತೆರದಿ

ಕ್ಷಣದಲಿ ದಹಿಸದೆ ಸನುಮತೆಂದೆನಲು ಅನುಗೃಹಿಸಿ ತ್ವರದಿ

ಸನುಮಾರ್ಗಪ್ರದ, ದರುಶÀನದು ಪ್ರಕೃತಿನೆನೆವೆನು ಇಹಪÀರದಿ 4


ಮಾಮನೋರಮಪದ ತಾಮರಸಂಗಳನೇಮದಿ ಪೂಜಿಪನೆ

ತಾಮಸಖಳಮದ ಸಾಮಜಮೃಗ ಪತಿ ಧೀಮಂತಪ್ರಿಯನೆ

ಈ ಮಹಿಯೊಳುನಿಮ್ಮ ಪಾಮರ ನಾ

ನಿಮ್ಮ ಪ್ರೇಮದಿನಂಬಿಹೆನೆ

ರಾಮನಾಮರತಿ ನೇಮದಿಕೂಡು ವರದೇಶ ವಿಠಲಪ್ರೀಯನೆ 5

***

 

No comments:

Post a Comment