Sunday, 1 August 2021

ಪ್ರಾಣೇಶ ದಾಸಾರ್ಯರ ಪದಯುಗಗಳ ankita varadesha vittala pranesha dasa stutih

..

kruti by ವರದೇಶ ವಿಠಲರು varadesha vittala dasaru

ಪ್ರಾಣೇಶ ದಾಸರಾಯರ ಸ್ತೋತ್ರ


ಪ್ರಾಣೇಶ ದಾಸಾರ್ಯರ ಪದಯುಗಗಳ

ಸಾನುರಾಗದಲಿ ಸ್ಮರಿಸುವರ

ನಾನಾಜನುಮದ ಪಾಪ ತರಿದು ಸುಜ್ಞಾನ

ಭಕುತಿಯನ್ನು ಕೊಡುತಿಹರು ಪ


ವರಕಾಶ್ಯೊಪಸದ್ಗೋತ್ರದಿ ಲಿಂಗಸು -

ಗುರು ಕರಣಿಕರಲಿ ಸಂಜನಿಸಿ

ತಿರುಕಾರ್ಯರ ಪರತನುಭವಯೋಗೀಂ -

ದ್ರರು ಯಂಬ ಸುನಾಮದಿ ಕರಿಸಿ 1


ಕೆಲವುಕಾಲ ಲೌಕಿಕವನುಸರಿಸುತ

ಲಲನೆ ತರಳರಿಂದೊಡಗೂಡಿ

ಬಲು ವಿನಯದಿ ಸಾಧುಗಳರ್ಚಿಸಿ ನಿ -

ರ್ಮಲ ವೈರಾಗ್ಯ ಮನದಿ ಕೂಡಿ2


ಮೂಜಗದೊಳು ಪ್ರಖ್ಯಾತರೆನಿಸಿದ

ಶ್ರೀ ಜಗನ್ನಾಥಾರ್ಯರ ಪಾದಾಂ -

ಭೋಜ ಭಜಿಸಿ ಪ್ರಾಣೇಶಾಂಕಿತವನು

ತಾಜವದಿಂದವರಲಿಪಡೆದ 3


ಶ್ರೀಶಪಾದಯುಗ್ಮಗಳಲಿ ಸದ್ರತಿ

ದಾಸಜನಗಳಲಿ ಸದ್ಭಕುತಿ

ಹೇಸಿಭವದ ಸುಖದಾಸೆ ಜರಿದು ಸಂ -

ತೋಷದಿ ಧರಿಸಿಹ ಸುವಿರಕುತಿ 4


ಕಾಮಾದ್ಯರಿಷಡ್ವರ್ಗವಗೆಲಿದು

ನೇಮದಿ ಯಮನಿಯಮವ ವಹಿಸಿ

ತಾ ಮುದದಲಿ ನಲಿಯುತ ಕೀರ್ತಿಸುತಿಹ

ಶ್ರೀ ಮನೋಹರನ ಸುಗುಣರಾಶಿ 5


ಪರಿಪರಿ ಹರಿಕಥೆವರ ಪ್ರಮೇಯಗಳ

ಸರ್ವಜ್ಞ್ಞರ ಉಕ್ತ್ಯನುಸರಿಸಿ

ವಿರಚಿಸಿ ಹರಿಮಂದಿರದ ಸುಪಥ ಪಾ -

ಮರರಿಗೆ ಸೌಕರ್ಯವಗೈಸಿ 6


ವರದೆಂದ್ರರ ಪದಸರಸಿಜ ಸೇವಿಸಿ

ಹರುಷದಲವರ ಕರುಣ ಪಡೆದ

ವರವೃಂದಾವನ ಸಂಸ್ಥಾಪಿಸಿ

ಪರಿಪರಿಯಿಂದಲಿಯಾರಾಧಿಸಿದ7


ಜ್ಞಾನದಿಲಯವನು ಚಿಂತಿಸುತಾ ಚಿತ್ರ

ಬಾನುಸಪ್ತಮಿ ಯಾಶ್ವಿಜಶುದ್ಧ

ಜಾನಕಿ ಪತಿಪದ ಧೇನಿಸಿಹರಿಪುರ

ಕೀನರ ದೇಹ ಜರಿದು ಸಾರ್ದ 8


ಪರಮಭಾಗವತರೆನಿಸುವರಿವರನ

ವರ ತನದ ಸುಮಾಲಿಕೆ ಸತತ

ಸ್ಮರಿಸುವ ಭಕುತರ ಪುರುಷಾರ್ಥಗಳನು

ವರದೇಶವಿಠಲನ ಕೊಡುವ ತ್ವರಿತ 9

***

 

No comments:

Post a Comment