ಪ್ರಾಣ ಸಂಕರುಷಣಭವ ಜಗತ್ರಾಣ
ಅಣುಮಹದ್ಘನಗುಣಗಣನೀನೆ ಮುಖ್ಯಪ್ರಾಣ ಪ
ತೃಣಜೀವರಾದಿ ಜಂಗಮಜಡದೊಳು
ಪೂರ್ಣನಹುದೊ ಶ್ರೀಹರಿಪ್ರೇರಣೆಯಿಂದ ಅ.ಪ
ಪ್ರಾಣ ನಿನ್ನಿಂದಲೆ ಸರ್ವರತ್ರಾಣ ಪ್ರವೃತ್ತಿಯೂ ನಿನ್ನಯ
ಆಣತಿಯಂತಿರ್ಪುದಯ್ಯಾ ಮುಖ್ಯ
ಪ್ರಾಣನೆ ತ್ರಿವಿಧಜೀವರೊಳನವರತದಿ ನೀ ನೆಲೆಸಿ
ಏನೇನು ಮಾಳ್ಪಕರ್ಮಂಗಳೆಲ್ಲವು ನಿನ್ನಿಂದೈಯ್ಯಾ
ಪ್ರಾಣೋಪಾನವ್ಯಾನೋದಾನಸಮಾನರ
ತ್ರಾಣ ನಿನ್ನದೊ ಮುಖ್ಯಪ್ರಾಣದೇವನೆ
ಪ್ರಾಣಿಗಳಲಿ ಪಂಚಪ್ರಾಣರೂಪದಲಿಹೆ
ಪ್ರಾಣಿಕಾರ್ಯಕ್ಕೆಲ್ಲ ನೀನಾಧಾರನೋ 1
ಸ್ಥೂಲಶರೀರದೊಳು ಪಾಯೂಪಸ್ಥದಿ ಸ
ಕಲಮಲಗಳಾದ್ಯಪಸರಣಾದಿಗಳಿಂದ ರಕ್ಷಣೆ
ಎಲ್ಲಪಾನನಿಂದಲಿ ಮಾಡಿಸಬಲ್ಲೆ
ಮುಖನಾಸಿಕನೇತ್ರದಿ ಎಲ್ಲಶ್ವಾಸಾದಿಗಳಾಡಿಸಬಲ್ಲೆ
ಕಾಲಕಾಲಕುಶ್ವಾಸಪ್ರಣಯದಿಂದಲಿ
ಎಲ್ಲಕಾಲದೊಳು ಪ್ರಾಣನೆಂಬರೋ
ಎಲ್ಲ ಜೀವರೊಳು ನಿಂತು ನಡೆವೆ ಶ್ರೀ-
ನಲ್ಲನಾಜ್ಞೆಯಂತನುವರ್ತಿಸುವೆಯೊ 2
ಎಪ್ಪತ್ತೆರಡು ಸಾವಿರವಿಹ ನಾಡಿ ಒಡಗೂಡಿ ಅನುದಿನ
ಇಪ್ಪ ಈ ಜಡದೇಹವನೇ ನೋಡಿ ವ್ಯಾಪಿಸಿ ವ್ಯಾನನಿಂದ
ರಸಗಳಾ ನಾಡಿಗೆ ಕೊಂಡೋಡಿ
ತಪ್ಪದೆ ನಾಡಿಕಾರ್ಯವನೆಲ್ಲ ಕ್ರಮದಿ ಮಾಡಿ
ಒಪ್ಪೆ ಉದಾನಸುಷುಮ್ನನಾಡಿಯೊ
ಒಪ್ಪಿಸುವೆ ಸುಖದುಃಖಫಲವನು
ಪಾಪಪುಣ್ಯದಂತೆ ಜೀವರಿಗೆ ಲೋಕವ
ಪ್ರಾಪಿಸಿಕೊಡುವಿಯೊ ಆಜ್ಞೆಯಿಂ 3
ಭುಕ್ತವಾದನ್ನವೆ ಮೊದಲಾದ್ದೆಲ್ಲ
ತತ್ತಸ್ಥಳಗಳಿಗೊಯ್ವಪ್ರಯುಕ್ತ
ಪ್ರಾಣಾಪಾನರಮಧ್ಯಪ್ರಾದೇಶವಾದ
ನಾಡಿಯಲಿದ್ದ ಸಮಾನವಾಯುವಿಂ ಶಕ್ತಿಯಸಕಲಾವಯವಕೀವ
ಶಕ್ತಿಯಿಲ್ಲದತ್ಯಲ್ಪಜೀವರಿಗೆ
ಶಕ್ತಿಯಿತ್ತು e್ಞÁನೇಂದ್ರಿಯ ವೃತ್ತಿಯ
ವ್ಯಕ್ತಮಾಡಿ ಫಲವಿತ್ತು ಪೊರೆವೆಯೋ
ಮುಕ್ತರೊಡೆಯನಿಗೆ ಅತ್ಯಂತ ಹಿತಕರ 4
ಪ್ರಾಣಾ ನೀ ಬಾಹ್ಯಾದಿತ್ಯನೊಳಿದ್ದು ಅಧ್ಯಾತ್ಮನೆನಿಸಿ
ಕಣ್ಣೀನೊಳಾದಿತ್ಯನಲಿ ಬಂದು ಅಧಿಭೂತನೆನಿಸಿ
ಕಣ್ಣೀನಭಿಮಾನಿಪ್ರಾಣನ ಸೇರಿ-ಅಧಿದೈವವೆಂದು
ಎಣಿಪರೊ ಈ ವಿಧ ತ್ರಯಗತನೆಂದು
ತೃಣ ಮೊದಲಾದ ಸರ್ವಜೀವರ
ಪ್ರಾಣಪಂಚರೊಳು ಮುಖ್ಯಪ್ರಾಣನೆ
ಫಣಿಗಿರೀಶ ಶ್ರೀ ವೆಂಕಟೇಶನ-
ಪ್ಪಣೆಯಂತೆ ನೀ ನಿಯಾಮಕನಾಗಿಹೆ 5
****
by ಉರಗಾದ್ರಿವಾಸವಿಠಲದಾಸರು
ಪ್ರಾಣ ಸಂಕರುಷಣಭವ ಜಗತ್ರಾಣ ಮುಖ್ಯಪ್ರಾಣ ಪ
ತೃಣಜೀವರಾದಿ ಜಂಗಮಜಡದೊಳು
ಪೂರ್ಣನಹುದೊ ಶ್ರೀಹರಿಪ್ರೇರಣೆಯಿಂದ ಅ.ಪ
ಪ್ರಾಣ ನಿನ್ನಿಂದಲೆ ಸರ್ವರತ್ರಾಣ ಪ್ರವೃತ್ತಿಯೂ ನಿನ್ನಯ
ಆಣತಿಯಂತಿರ್ಪುದಯ್ಯಾ ಮುಖ್ಯ
ಪ್ರಾಣನೆ ತ್ರಿವಿಧಜೀವರೊಳನವರತದಿ ನೀ ನೆಲೆಸಿ
ಏನೇನು ಮಾಳ್ಪಕರ್ಮಂಗಳೆಲ್ಲವು ನಿನ್ನಿಂದೈಯ್ಯಾ
ಪ್ರಾಣೋಪಾನವ್ಯಾನೋದಾನಸಮಾನರ
ತ್ರಾಣ ನಿನ್ನದೊ ಮುಖ್ಯಪ್ರಾಣದೇವನೆ
ಪ್ರಾಣಿಗಳಲಿ ಪಂಚಪ್ರಾಣರೂಪದಲಿಹೆ
ಪ್ರಾಣಿಕಾರ್ಯಕ್ಕೆಲ್ಲ ನೀನಾಧಾರನೋ 1
ಸ್ಥೂಲಶರೀರದೊಳು ಪಾಯೂಪಸ್ಥದಿ ಸ
ಕಲಮಲಗಳಾದ್ಯಪಸರಣಾದಿಗಳಿಂದ ರಕ್ಷಣೆ
ಎಲ್ಲಪಾನನಿಂದಲಿ ಮಾಡಿಸಬಲ್ಲೆ
ಮುಖನಾಸಿಕನೇತ್ರದಿ ಎಲ್ಲಶ್ವಾಸಾದಿಗಳಾಡಿಸಬಲ್ಲೆ
ಕಾಲಕಾಲಕುಶ್ವಾಸಪ್ರಣಯದಿಂದಲಿ
ಎಲ್ಲಕಾಲದೊಳು ಪ್ರಾಣನೆಂಬರೋ
ಎಲ್ಲ ಜೀವರೊಳು ನಿಂತು ನಡೆವೆ ಶ್ರೀ-
ನಲ್ಲನಾಜ್ಞೆಯಂತನುವರ್ತಿಸುವೆಯೊ 2
ಎಪ್ಪತ್ತೆರಡು ಸಾವಿರವಿಹ ನಾಡಿ ಒಡಗೂಡಿ ಅನುದಿನ
ಇಪ್ಪ ಈ ಜಡದೇಹವನೇ ನೋಡಿ ವ್ಯಾಪಿಸಿ ವ್ಯಾನನಿಂದ
ರಸಗಳಾ ನಾಡಿಗೆ ಕೊಂಡೋಡಿ
ತಪ್ಪದೆ ನಾಡಿಕಾರ್ಯವನೆಲ್ಲ ಕ್ರಮದಿ ಮಾಡಿ
ಒಪ್ಪೆ ಉದಾನಸುಷುಮ್ನನಾಡಿಯೊ
ಒಪ್ಪಿಸುವೆ ಸುಖದುಃಖಫಲವನು
ಪಾಪಪುಣ್ಯದಂತೆ ಜೀವರಿಗೆ ಲೋಕವ
ಪ್ರಾಪಿಸಿಕೊಡುವಿಯೊ ಆಜ್ಞೆಯಿಂ 3
ಭುಕ್ತವಾದನ್ನವೆ ಮೊದಲಾದ್ದೆಲ್ಲ
ತತ್ತಸ್ಥಳಗಳಿಗೊಯ್ವಪ್ರಯುಕ್ತ
ಪ್ರಾಣಾಪಾನರಮಧ್ಯಪ್ರಾದೇಶವಾದ
ನಾಡಿಯಲಿದ್ದ ಸಮಾನವಾಯುವಿಂ ಶಕ್ತಿಯಸಕಲಾವಯವಕೀವ
ಶಕ್ತಿಯಿಲ್ಲದತ್ಯಲ್ಪಜೀವರಿಗೆ
ಶಕ್ತಿಯಿತ್ತು e್ಞÁನೇಂದ್ರಿಯ ವೃತ್ತಿಯ
ವ್ಯಕ್ತಮಾಡಿ ಫಲವಿತ್ತು ಪೊರೆವೆಯೋ
ಮುಕ್ತರೊಡೆಯನಿಗೆ ಅತ್ಯಂತ ಹಿತಕರ 4
ಪ್ರಾಣಾ ನೀ ಬಾಹ್ಯಾದಿತ್ಯನೊಳಿದ್ದು ಅಧ್ಯಾತ್ಮನೆನಿಸಿ
ಕಣ್ಣೀನೊಳಾದಿತ್ಯನಲಿ ಬಂದು ಅಧಿಭೂತನೆನಿಸಿ
ಕಣ್ಣೀನಭಿಮಾನಿಪ್ರಾಣನ ಸೇರಿ-ಅಧಿದೈವವೆಂದು
ಎಣಿಪರೊ ಈ ವಿಧ ತ್ರಯಗತನೆಂದು
ತೃಣ ಮೊದಲಾದ ಸರ್ವಜೀವರ
ಪ್ರಾಣಪಂಚರೊಳು ಮುಖ್ಯಪ್ರಾಣನೆ
ಫಣಿಗಿರೀಶ ಶ್ರೀ ವೆಂಕಟೇಶನ-
ಪ್ಪಣೆಯಂತೆ ನೀ ನಿಯಾಮಕನಾಗಿಹೆ 5
*********
No comments:
Post a Comment