Thursday, 5 August 2021

ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)


ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ

ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ.

ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು 1
ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ 2
ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ 3
ವಾಣೀ ಕರಧೃತ ವೀಣಾಪಾಣೀಷಣ್ಮಹಿಷೆರು ಸಹ ಸಮ ಶಿವರಾಣೀಬಂದಿಹರು ಶಚಿ ಶಾಮಲಾ ಸೋಮನರಮಣಿಮತ್ತೆ ಬಂದಿಹರು ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ 4
ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು 5
***

No comments:

Post a Comment