..
kruti: tandevaradagopala vittala (ಪ್ರಹ್ಲಾದಗೌಡರು)
ಲೇಸಾಗಿ ಭಜಿಸುವೆ ಗೋಪಾಲದಾಸರ ರಾಶಿ ದುರಿತಂಗಳಾ ಪ
ವಾಸವಾ ಪಿಡಿದ ವಜ್ರವೀಗಿರಿಯಂತೆ ನಿಶ್ಶೇಷದಿ ಭೇದಿಪರೊಇವರು ಅ.ಪ.
ಮುರಹರ ನಾಮಕ ವರದ್ವಿಜೋತ್ತಮ ಸತಿ ಗಿರಿವಾಸ ನಾಮಕಳಾ ಸುರುಚಿರೋದರವೆಂಬೊ ಶರನಿಧಿಯಲ್ಲಿ ಚಂದಿರನಂತೆ ಉದಿಸಿಹರೋ ಇವರು 1
ಸದಮಲಮನದಲ್ಲಿ ಪದುಮನಾಭನ ನಾಮ ಪದೋಪದಿಯಲ್ಲಿ ಬಿಡದೇ ಪದರೂಪದಲ್ಲಿ ಪೊಗಳುವೊ ಸುಜನರಿಗೆ ಮೋಹವನುಣಿಸುತಿಹರೊ ಇವರು 2
ವಿಜಯದಾಸರೇ ತಮ್ಮ ನಿಜಗುರುಗಳೂ ಎಂದು ಭಜಿಪರೋ ಭಕುತಿಯಲ್ಲಿ ದ್ವಿಜವರ್ಯ ಜನಕಿಷ್ಟ ಸೃಜಿಸೋರು ಕಲ್ಪ ಭುಜದಂತೆ ನಿರುತದಲ್ಲಿ ಇಲ್ಲಿ 3
ಕುಂಡಲೀ ಗಿರಿವಾಸ ಪಾಂಡುರಂಗನ ಕ್ಷೇತ್ರ ತೊಂಡ ಪ್ರಹ್ಲಾದ ಪ್ರಿಯನ ಮಂಡಲ ಯತಿಗಳ ಬೆಳೆಪ ಯಾತ್ರೆಗಳ ಕೈಕೊಂಡು ಸೇವಿಸುತಿಹರೊ ಇವರು 4
ಭಕುತಿ ಪ್ರಾಚುರವಾಗೆ... ಹರಿನಾಮಪ್ರಕಟಿಸಿ ಕವನದಿಂದಾ ನಿಖಿಳಾಭೀಷ್ಟವನೀವ ಲಕುಮೀಪತಿಯೇ ಎಂದು ಭಕುತಗೆ ಬೋಧಿಪರೊ ಇವರು 5
ಆವಾವ ಕ್ರಿಯೆಗಳಲ್ಲಾವಾವ ಕಾಲದಿ ತಾವದಗಿನ್ನು ಹರಿಕಾವ ಸುಜೀವರ ಈ ವಿಧವೆಂದು ತನ್ನವರಿಗುಪದೇಶಿಪಾ6
ಓಂ ಓಂ ಭಾವಿಂತೆಂದೊಲಿಸಲು ಭಕುತಿ ಭಕುತಿ ಪುಟ್ಟಿಸುವನೊ ಶ್ರೀ ಅರಸನ ಪಾದದೀಗಾ ಎಂದು ಎಚ್ಚರಿಸೆ ಗಂಗಾಜನಕ ಭವ ತೋಯದಿ ಕಡೆಗೆತ್ತುವಾ . 7
ಣಾ ಎಂದುಪಾಸನೆ ಮಾಡುವ ಸುಜನ ಜನರ ಕಾಯಕ್ಲೇಶವ ಕಳೆದು ಮಾಯಾರಮಣನ ವಲಿಸುವಂಥ ದಿವ್ಯ ಉಪಾಯವ ತೋರಿಪರೊ ಇವರು 8
ಮಂದ ಮನುಜ ನಾನು ಒಂದೊಂದಿವರ ಗುಣವೃಂದ ಪೊಗಳಲೊಶವೇ ತಂದೆ-ವರದಗೋಪಾಲವಿಠ್ಠಲನ ಹೊಂದಿ ಸೇವಿಪ ಗುರುವೇ 9
***
No comments:
Post a Comment