Thursday, 5 August 2021

ಧರೆಯೊಳು ನಾ ಬಂದು ಇರುಳು ಹಗಲು ನಿನ್ನ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಧರೆಯೊಳು ನಾ ಬಂದು ಇರುಳು ಹಗಲು ನಿನ್ನ

ಸ್ಮರಣೆಯ ಮಾಡದೆ ಪರರ ಬಾಗಿಲ ಕಾಯ್ದೆ

ಮುರಲೀಧರ ಶ್ರೀಕೃಷ್ಣ ಪೊರಿಯೊ ತಪ್ಪನು ಕ್ಷಮಿಸಿ

ಗೊಲ್ಲರ ಸಖದವನೇ ಶ್ರೀವತ್ಸಾಂಕಿತನೇ

ನಾರದನಂದನ ನೀನು ಗಾರುಮಾಡಿಯೆನ್ನ

ದೂರಗ್ರಹಿಸಲು ಈಗ ಆರು ಕಾಯರೋ

ಜಾರ ಚೋರ ಕೃಷ್ಣ ಮಾರಜನಕ ನೀನು

ಪಾರಗಾಣಿಸು ದೇವ ಶಿರಿವತ್ಸಾಂಕಿತನೇ

***


No comments:

Post a Comment