..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ಧೀರೇಂದ್ರ ಯತಿಗಳು
ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ
ಪದಕಮಲದಲಿ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ.
ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ 1
ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ 2
ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ಕøಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ 3
***
No comments:
Post a Comment