Monday, 2 August 2021

ನೆನಿ ಮನ ಅನುದಿನದಿ ಅನಮಾನಿಸದೆ ನೀ ankita sirigovinda vittala satyajnana teertha stutih

ನೆನಿ ಮನ ಅನುದಿನದಿ ಅನಮಾನಿಸದೆ ನೀ ಪ


ನೆನಿಮನ ಶ್ರೀ ಸತ್ಯಜ್ಞಾನರ ಅನಘಹೃದ್ವನಜದಲಿ

ಘನ ದಿನ ಮಣಿಯವೊಲ್ ಮಿನುಗುವನ

ಗುಣ ಗಣ ತನು ಮರೆದು ಕುಣಿಕುಣಿದು ಹರುಷದಿ ಅ.ಪ


ಜ್ಞಾನಾತ್ಮ ಪರನೆಂದು ಮಿಕ್ಕಾದದಿತಿಯರು

ಊನರು ಹರಿಗೆಂದು

ಚೇತÀನರ ಅವನಾಧೀನರು ಅಹುದೆಂದು

ವಿಸ್ತರಿಸಿ ಪೇಳಿದ ದಿನಪಾಲಕದೇವ ಶ್ರೀ

ಪವಮಾನ ಮತ ಅಂಬುಧಿಯೊಳನುದಿನ

ಮೀನನೆನಿಸಿದ ನಮ್ಮ ಸತ್ಯಜ್ಞಾನ

ತೀರ್ಥರ ಮಾನದಂಘ್ರೀಯ 1


ಕಮಲಾಪ್ತಗಧೀಕವಾದ ತೇಜದಲಿ ಪೊಳೆಯುವ

ಕಮಲಾಪತಿಯ ಸುಪಾದಾ ಅತಿ ವಿಮಲತನ

ಹೃತ್ಕಮಲದೊಳಿಟ್ಟು ಸದಾ ಭಯಹಾರಿ ಕರದ್ವಯ

ಕಮಲದಿಂ ಸೇವಿಸುತ ಮೈಮುಖ

ಕಮಲಚಂದಿರನೆನಿಸಿ ಸಜ್ಜನ ಕಮಲದ ಮಹಿಮೆಯ

ತೋರ್ದ ಗುರುತಮ ಕಮಲ ಸಂಭವ ಪಿತನ ಪೂತನ 2


ಇಂದ್ರ ಲೋಕವ ತೊರೆದು ಕೆಲಕಾಲ ತಾರ

ಕೇಂದ್ರನೊಳು ಭುವಿಗಿಳಿದು ಸಜ್ಜನರ ಪೊರೆವದ

ಕಿಂದ್ರಿಯಂಗಳ ಗೆಲಿದು ಸನ್ಯಾಸ ಕೊಂಡು

ಇಂದ್ರ ಹರಿಹರ ಶೀತ ರಘುಕುಲ ಇಂದ್ರನಾವ ಉ

ಪೇಂದ್ರ ಶಿರಿಗೋವಿಂದ ವಿಠಲನ ಭಜಿಸಿ ರಾಜ ಮ

ಹೇಂದ್ರಿಯ ತನುವಿಟ್ಟ ಗುರುಪದ 3

****


No comments:

Post a Comment