Wednesday, 1 September 2021

ಸ್ಮರಿಸು ಜೀವಿಸು ಮಾನವ ankita shyamasundara

 ..

ಸ್ಮರಿಸು ಜೀವಿಸು ಮಾನವ ಪ


ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ

ಹರುಷ ತೀರ್ಥರ ಸುಮತ ಶರಧಿ ಚಂದಿರನಾದ

ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ

ಪರಮ ಸಾಧು ಸಹ್ಲಾದ ಅ.ಪ


ಎರಡೊಂದು ಯುಗದಲ್ಲಿ ತರಣಿ ತನಯನ ಸೂತ

ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ

ಮರುತ ದೇವನ ಪದಕೆ ಬರುವ ಯತಿಗಳ ದೂತ

ವರದೇಂದ್ರ ತೀರ್ಥರಿಗೆ ಪ್ರೀತ ||

ಗುರುಧೇನು ಪಾಲ ವಿಜಯ ದಾಸವರ್ಯರ ಮಮತ

ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ

ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ

ನಮಗೀತ ಗತಿ ಪ್ರದಾತ 1


ಭಾರತೀಶನು ಗೈದ ಘೋರ ದುರಿತ ವಿದೂರ

ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ

ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ

ಸಾರಿದಂಥ ಸುಧೀರ ||

ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ

ಸೇರಿ ಸೇವಿಪ ಸುಜನ ಕೋರಿಕೆಯ ಮಂದಾರ

ಭೂರುಹದ ತೆರದಿ ಘುನ ಸೂರೆ ಕೊಡುವನುದಾರ

ದುರಿತವಿಪಿನ ಕುಠಾರ 2


ಇವರ ಕವನ ಪಠಣ ಶ್ರವಣ ಮನನಗಳಿಂದ

ಲವಕೇಶವಾಗದು ಜವನ ಭವನದ ಬಂಧ

ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ

ಗೈದ ಮನಜ ದಿವಾಂಧ |

ಭುವನದೊಳು ಬೆಳಗುತಿಹ ಇವರ ಮಹಿಮಾನಂದ

ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ

ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ

ನೆಲಸಿಹವು ನಲವಿಂದ 3


ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ

ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ

ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ

ಹರಿಗೆ ಪಂಚಪ್ರಾಣ ||

ಅರುಹಲೇನಿವರ ಚರಣನಂಬಿದ ಸುಜನ

ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ

ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ

ಸೇರಿದರು ನಿಜ ಸ್ಥಾನ 4


ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ

ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ

ಕಾಮಾದಿ ಷಡ್ವೈರಿ ಸ್ತೋಮ ತಿಮಿರ ದಿನೇಶ

ಭೂಮಿ ವಿಬುಧರ ಪೋಷ ||

ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ

ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ

ಪ್ರೇಮದಿಂದಲಿ ಸತತ ಸುಜನ ಕುಮುದ ವಿಕಾಸ

ಗೊಳಿಸಿಗರೆದುದುಲ್ಹಾಸ 5

***


No comments:

Post a Comment