..
kruti by shreeshapranesha vittala dasaru
ಪೋಷಿಸೆನ್ನ ಜೀಯಾ | ಗುರು |ಪ್ರಾಣೇಶ ದಾಸರಾಯಾ |ಶ್ರೀಶನ ಗುಣ ಸಂತೋಷದಿ ಪಾಡುವ |ದಾಸ ಕುಲಾಗ್ರಣಿಯೇ | ಎಣಿಯೆ ಪ
ಹರಿಸ್ಮರಣೆಯ ಮರೆದೂ | ಸರ್ವದ |ಪದದನ್ನಕೆ ಬೆರಿದೂ |ದುರುಳ ಜನರ ಸಹವಾಸವನ್ನು ಮಾಡಿ |ಬಂದೆ ದಿನವ ಕಳೆದೇ ಉಳದೇ 1
ಪವನ ಮತದೊಳಿಟ್ಟೂ | ಶ್ರೀ ಹರಿ |ಸ್ತವನವನ್ನೆ ಕೊಟ್ಟೂ |ಕವಿಗಳ ಮುಖದಿಂ ತತ್ವವಿಚಾರದಿ |ಕವಲ ಮತಿಯ ಪಾಲಿಸೀ, ಉದ್ಧರಿಸೀ 2
ಮನ್ನ ಭಿನ್ನಪವನ್ನು ಕೇಳಿ |ಮನ್ನಿಸು ಸುರಧೇನೂ |ಘನ್ನ ಶ್ರೀಶ ಪ್ರಾಣೇಶ ವಿಠಲನ ಧ್ಯಾನ |ವನ್ನು ಮಾಳ್ವ ಶಕ್ತಾ ವಿರಕ್ತಾ 3
***
No comments:
Post a Comment