kruti by shreeshapranesha vittala dasaru
ದಶಾವತಾರ ಸ್ತೋತ್ರ
ನಾರಾಯಣ ಗೋವಿಂದ | ಹರಿ |ನಾರಾಯಣ ಗೋವಿಂದ |
ಪಾರಾಶರ ಸುತನಂದ | ಹರಿ |ನಾರಾಯಣ ಗೋವಿಂದ ಪ
ವೇದವ ಕದ್ದೊಯ್ಯಲು ಆತಮನಾ |ಬಾಧಿಸಿ ನಿಗಮವ ತಂದ 1
ದಿವಿಜರು ಚ್ಯುತಬಲರಾಗಿರಲಮೃತವ |ದಿವಿಜರಿಗುಣಿಸಿದ ನಂದಾ 2
ಖಳನು ಭೂಮಿಯ ಕದ್ದೊಯ್ಯಲುತಾ |ಪೊಳೆವ ಕೋರಿಯಲಿ ತಂದಾ 3
ತರುಳನ ಪರಿಪರಿ ಬಾಧಿಸುತಿರಲಾ |ದುರುಳ ದೈತ್ಯನ ಕೊಂದ 4
ಬಲಿಯಪರಾಧವ ನೊಂದೆಣಿಸದೆ ತಾ |ವರಿದು ಬಾಗಿಲಲಿ ನಿಂದ 5
ಕ್ಷತ್ರಿಯ ಬಲವನೆಲ್ಲ ಸವರಿ ನಿ |(ಶ್ಚ) ಕ್ಷತ್ರರ ಮಾಡಿದ ನಂದಾ 6
ವರಮುನಿ ಶಾಪದಿ ಶಿಲೆಯಾಗಿರಲು |ದ್ಧರಿಸಿದ ಪರಮಾನಂದಾ 7
ಮಡದಿ ಗೋಪಿಯರ ಒಡನಾಡಿದ |ಪಾಲ್ಗಡಲ ಶಯನ ಮುಕ್ಕುಂದಾ 8
ತ್ರಿಪುರದ ಸ್ತ್ರೀಯರ ವೃತಗೆಡಿಸಿದ | ವಟು |ವಪು ಮೃಡಮುಖ ಸುರವಂದ್ಯಾ 9
ಪುರುಷೋತ್ತಮ ಯವನರ ಸಂಹರಿಸಿ |ತುರಗವನೇರಿ ನಿಂದಾ 10
ಶ್ರೀಶ ಪ್ರಾಣೇಶ ವಿಠಲ ಈ ಸರ್ವರ |ಪೋಷಕ ನಾನಹುದೆಂದಾ 11
***
No comments:
Post a Comment