Wednesday, 1 December 2021

ರಾಯರ ನೋಡಿರೈ ದಾಸರಾಯರ ಪಾಡಿರೈ ankita shreeshapranesha vittala DASARA NODIRAI DAASARAAYARA PAADIRAI JAGANNATHA DASA STUTIH

 


kruti by shreeshapranesha vittala dasaru

ಶ್ರೀ ಜಗನ್ನಾಥದಾಸರ ಸ್ತೋತ್ರ


ರಾಯರ ನೋಡಿರೈ ದಾಸರಾಯರ ಪಾಡಿರೈ ||ಪ||


ಮಾಯಾ ರಮಣ ಪ್ರಿಯ ಇವರ ಮನದೊಳಗೆ ಸುಳಿದ

ಶ್ರೀರಂಗ ಒಲಿದ ಕ್ಷೋ-

ಣಿಯೊಳಗೆ ಜನಿಸಿದ ಪ್ರಥಮದಿ ಸಹ್ಲಾದಾ - ಜನರಿಗೆ ಮೋದಾ ||೧||


ಕಾಣಿಸುವುದು ಜಗದೊಳಗೆ ಇವರ ಕೀರುತಿಯು

ಪುಣ್ಯ ಮೂರುತಿಯೂ

ಧೇನಿಪ ಎರಡನೇ ಜನ್ಮದಿ ಈತನೇ ಶಲ್ಯ ತತ್ತ್ವವ ಬಲ್ಲ ||೨||


ಮೂರನೇ ಜನ್ಮದಿ ಕೊಂಡಪ್ಪ

ರಾಜರ ದೂತಾ - ಸುಪ್ರಖ್ಯಾತಾ

ಸಾರ ಜನರ ಪ್ರಿಯ ಪುರಂದರ

ಗುರುದಾಸರ್ಯಾ - ಸುತ ಆಶ್ಚರ್ಯಾ ||೩|| 


ತೋರಿದ ಐದನೇ ಜನ್ಮದಿ ಶ್ರೀ ಹರಿ ದೂತಾ

ಗುರು ಜಗನ್ನಾಥಾ ಎಷ್ಟು ಹೇಳಲಿ

ಇವರ ಮಹಿಮೆ ತುತಿಸಲ್ಕೆ ವಶನಲ್ಲ ಮನಕೆ ||೪||


ನಿಷ್ಠೆಯಿಂದಿವರ ತುತಿಸಲು ಶ್ರೀವರ

ತುಷ್ಠ - ಪಾಪವು ನಷ್ಟ

ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶ

ವಿಠ್ಠಲ ದಾಸಾ - ದಾಸೋತ್ತಂಸಾ ||೫||

***


raayara nODirai daasaraayara paaDirai ||pa||


maayaa ramaNa priya ivara manadoLage suLida

SrIraMga olida kShO­­-

NiyoLage janisida prathamadi sahlaadaa - janarige mOdaa ||1||


kaaNisuvudu jagadoLage ivara kIrutiyu

puNya mUrutiyU

dhEnipa eraDanE janmadi ItanE Salya tattvava balla ||2||


mUranE janmadi koMDappa

raajara dUtaa - suprakhyaataa

saara janara priya puraMdara

gurudaasaryaa - suta AScaryaa ||3|| 


tOrida aidanE janmadi SrI hari dUtaa

guru jagannaathaa eShTu hELali

ivara mahime tutisalke vaSanalla manake ||4||


niShTheyiMdivara tutisalu SrIvara

tuShTha - paapavu naShTa

sRuShTiyoLage SrISa praaNESa

viThThala daasaa - daasOttaMsaa ||5||

***


ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ


ಭೂಮಿಯೊಳಗೆ ಜನಿಸಿದ, ಪ್ರಥಮದಿಸುಲ್ಹಾದ |ಜನರಿಗೆ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ 1


ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ 2


ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ 3


ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು 4


ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ 5

***


No comments:

Post a Comment