Sunday, 1 August 2021

ಸಂತಿಯ ಕೆಲವುರವಾಸ ಭಾರತಿ ಕಾಂತನು ankita shreeshapranesha vittala

..

kruti by shreeshapranesha vittala dasaru

ಸಂತಿಯ ಕೆಲವುರ ವಾಸನ ಸ್ತೋತ್ರ

(ಲಿಂಗಸುಗೂರಿನ ಹತ್ತಿರವಿರುವ ಸಂತಿಕೆಲೂರ ಗ್ರಾಮದಲ್ಲಿಯ ಪ್ರಾಣದೇವರು)


ಸಂತಿಯ ಕೆಲವುರವಾಸ ಭಾರತಿ |ಕಾಂತನು ಶ್ರೀ ಹರಿದಾಸಾ ||ಸಂತಸ ಸೇವಿಪರಘ ಓಡಿಸಿ | ನೀ |ಶ್ಚಿಂತರಮಾಡಿ ಪೊರೆವ ದಯಾಳೋ ಪ


ದಾಶರಥಿಯ ಪದಕೆರಗೀ | ನಿಂದುಲೇಸಾಗಿ ತುತಿಸುವ ಯೋಗೀ ||ಸಾಸಿರ ನಾಮನ ರಾಣಿಯಕಂಡು |ತೋಷದಿ ಸ್ವಾಮಿಗೆ ವಾರ್ತಿಯ ಪೇಳಿದ 1


ಕುಂಚಿ ಕುಮಾರಕ ನೆನಸೀ | ಮಹಹಂತ ಕೌರವರನೊರಸೀ ||ಕಾಂತಿಗೆ ಸೌಗಂಧಿಕ ಪುಷ್ಪವ ಮುಡಿಸಿ | ಶ್ರೀಕಾಂತನ ಪ್ರಿಯ ಭೂಭಾರವನಿಳುಹಿದ 2


ಆನಂದ ತೀರಥರಾಗಿ | ಪರಮಾನಂದದಿ ಕುಮತವನೀಗಿ ||ನಂದನ ಸುತ ಶ್ರೀಶ ಪ್ರಾಣೇಶ ವಿಠಲಾ |ನಂದನೆ ಪರನೆಂದು ಡಂಗುರ ಸಾರಿದ 3

***



No comments:

Post a Comment