Sunday, 1 August 2021

ಶ್ರೀರಮಣಪತಿ ವಿಠಲ ನೀ ಕರುಣಿಸೋ ಮಾರಪಿತ ಮರುತ ankita shreeshapranesha vittala

 ..

kruti by shreeshapranesha vittala dasaru


ಶ್ರೀ ರಮಣಪತಿ ವಿಠಲ ನೀ ಕರುಣಿಸೋ |ಮಾರಪಿತ ಮರುತ ಮನೆಮಂದಿರ ನಿವಾಸಾ ಪ


ಉದಯದಲಿ ಎದ್ದು ಹರಿಧ್ಯಾನವನು |ಮುದದಿಂದ ಬ್ಯಾಸರದೆ ನಿರುತ ಮಾಡಿ |ಸದಮಲ ಶ್ರೀ ಮುದ್ರಿಊಧ್ರ್ವಪುಂಡ್ರವ |ಪದುಮಾಕ್ಷಿ ಶ್ರೀತುಲಸಿಸರಗಳಿಂದಾ 1


ಹರಿಯೆ ಸರ್ವೋತ್ತಮಾ ತದ್ರಾಣಿ ಸಿರಿ ಬೊಮ್ಮ |ಮರುತ ದೇವರೆ ಗುರು ತಾರತಮ್ಯ |ವರ ಪಂಚಭೇದ ಜ್ಞಾನದ, ತತ್ವವಿಚಾರ |ಹರಿದಾಸ ಸಹವಾಸ ಸರ್ವದಾ ಕೊಟ್ಟು 2


ಶ್ರೀಶ ಪ್ರಾಣೇಶ ವಿಠ್ಠಲರಾಯನೇ ನಿನ್ನ |ದಾಸತ್ವವನೆ ಕೊಟ್ಟು ಉದ್ಧರಿಪದೋ ||ಲೇಸಾಗಿ ಪ್ರಾರ್ಥಿಸದೆ ಎನ್ನ ಭಿನ್ನಪವು ಉ |ದಾಸಿಸದೆ ನೀ ಕರುಣಿಸೆಂದು ದಿನದೇ 3

***


No comments:

Post a Comment