CHECK almost same lyrics by purandara dasaru
kruti by Srida Vittala Dasaru Karjagi Dasappa
On ಭಾಗೀರಥಿ
ಭಾಗೀರಥೀ ದೇವಿ ಭಯ ನಿವಾರಣ ಗಂಗೆ
ಸಾಗರ ನಿಜರಾಣಿ ಸಕಲ ಕಲ್ಯಾಣಿ ಪ
ಒಮ್ಮೆ ಶ್ರೀವಿಷ್ಣು ಪಾದದಲಿ ಉದ್ಭವಿಸಿದೇ
ಬ್ರಹ್ಮನ ಕರ ಪಾತ್ರೆಯಲ್ಲಿ ಬಂದೆ
ಒಮ್ಮೆ ನಾರಾಯಣನ ಪಾದ ತೀರ್ಥವಾದಿ
ಬ್ರಹ್ಮಾಂಡವೆಲ್ಲ ಪಾದನ್ನವೆಂದಿನಿಸಿದೆ 1
ದೇವಿ ನೀ ವಿಷ್ಣು ಪಾದದಲಿ ಉದ್ಭವಿಸಿದೆ
ದೇವತೆಗಳೆಲ್ಲ ನಿಮ್ಮಾಧೀನವೊ
ಆವ ಮಹಾದೇವನು ತಲೆಬಾಗಿರಲಾಗಿ ಮಹ
ದೇವ ಶಿರಸಿನಲಿ ಉದ್ಭವಿಸಿದೆ ಜಗವರಿಯೆ 2
ದೃಷ್ಟಿಸಿ ನೋಡಲು ನೂರು ಜನ್ಮದ ಕೃತ್ಪಾಪ
ಮುಟ್ಟಿದರೆ ಮುನ್ನೂರು ಜನ್ಮದ ಪಾಪವು
ಮುಟ್ಟಿಮಾಡಲಿ ಬಂದು ಸ್ನಾನ ಮಾತ್ರದಿಂದ
ಸುಟ್ಟುಹೋಗುವುದು ಸಹಸ್ರ ಜನ್ಮದ ಪಾಪ 3
ಜಹ್ನು ಋಷಿಯಿಂದಲಿ ಬಿದ್ದ ಕಾರಣದಿಂದ
ಜಾಹ್ನವಿಯಂತೆಂದು ನೀ ಕರೆಸಿಕೊಂಡೇ
ಮುನ್ನ ನರಕಾಸುರನÀ ಸಗರ ರಾಯನ ವಂಶ
ವನ್ನು ನೀ ಪಿಂತೆ ಪಾವನ ಮಾಡಬಂದೆ 4
ವಿಸ್ತಾರದಲಿ ಪೊಳಿವ ಮುತ್ತಿನಾ ಸರಗಳು
ಮತ್ತೆ ರಂಗಮ್ಮ ಪವಡಿಸಿದ ನೋಡೀ
ಮತ್ತೆ ಮಹಾಲಕ್ಷ್ಮಿಯೆ ಉರಸ್ಥಳದಲಿರಲಾಗಿ
ಇತ್ತ ಶ್ರೀದವಿಠಲ ನನರಸಿ ಬಂದೆ 5
***
No comments:
Post a Comment