..
kruti by Srida Vittala Dasaru Karjagi Dasappa
ರಾಧೆ
ತಿಲಕದ ಒಲುಮೆ ಮೇಲು ರಾಧೇ
ನಿನ್ನ ತಿಲಕದೊಲುಮೆ ಪ
ತಿಲಕದೊಲುಮೆ ಹರಿ ಬಂಧ ಒಲುಮೆ
ಘಿÀಲುಘಿÀಲುಕುಲು ಗೆಜ್ಜೆ ಕಾಲು ರಾಧೇ ನಿನ್ನ ಅ.ಪ.
ಕುಂಕುಮ ಕರದು ಹಚ್ಚಿ ವಂಕಿ ಬಾಜು ಬಂದಿನಿಟ್ಟು
ಪಂಕಜಾಕ್ಷನೆತ್ತಿಕೊಂಬೊ ತೋಳು ರಾಧೆ ನಿನ್ನ 1
ಉಟ್ಟುದು ಪೈಠಣಿ ಸೀರೆ ತೊಟ್ಟುದು ಬುಟ್ಟುದ ಕುಪ್ಪಸ
ಮುಟ್ಟಿದರೆ ಮಾಸುವದು ಶಾಲು ರಾಧೇ ನಿನ್ನ 2
ಕೈಗೆ ಬಂಗಾರದ ಬಳೆ ಕಿವಿಗೆ ಪರಿಜನ ವಾಲೆ
ರಂಗಯ್ಯ ಕರೆದರೆ ನೀ ಹೋ ಎಂಬೊ ರಾಧೆ ನಿನ್ನ 3
ಮಂಗಳಸೂತ್ರವು ಬೆಳದಿಂಗಳು ಪೊಳೆವಂತೆ
ತೆಂಗು ಬ್ಯಾಳೆ ಮಣಿಯೆಣ್ಣೆ ನೂಲು ರಾಧೆ ನಿನ್ನ 4
ಪಿಲ್ಯ ಕಾಲುಂಗುರ ಕಿರು ಬಲ್ಯ ಆಣಿಮೆಂಟು
ಧೈರ್ಯದಲಿ ಮೆರೆವ ಗಿಳಿಗೇಲು ರಾಧೆ ನಿನ್ನ 5
ಚೌರಿ ರಾಗಟಿ ಗೊಂಡೆ ಹೆರಳು ಬಂಗಾರವೂ
ಚಂದಿರ ಪ್ರಫುಲ್ಲ ಮುತ್ತಿನ ಬಟ್ಟು ರಾಧೆ ನಿನ್ನ6
ದಿಟ್ಟ ಹಗಲೊಳು ಶ್ರೀದವಿಠಲನ್ನ ಯೇರಿಕೊಂಡು
ಬಟ್ಟ ಬಯಲೊಳಗೆ ಕೇಳೇ ರಾಧೆ ನಿನ್ನ 7
***
No comments:
Post a Comment