Wednesday, 1 September 2021

ವರ್ಣಿಸಲಳವೆ ಸುಗುಣಸಾಂದ್ರನ ankita shree krishna

 ..

ವರ್ಣಿಸಲಳವೆ ಸುಗುಣಸಾಂದ್ರನ ಪ


ಕರ್ಣಜನಕಕೋಟಿ ತೇಜಶ್ರೀಶ ಭಜಕ ಜಯ ಮುನೀಂದ್ರನ ಅ.ಪ


ಮಧ್ವಶಾಸ್ತ್ರ ದುಗ್ಧ ನಿಧಿಯೊಳ್‍ಬುದ್ಧಿಯೆಂಬ ಮಂದರಗಿರಿಯಶುದ್ಧ ಸೂತ್ರ ನೇತ್ರದಿಂದಬದ್ಧಮಾಡಿ ಪಿಡಿದು ಕಡೆದುಶುದ್ಧ ಯುಕುತಿ ಸುಧೆಯ ತೆಗೆದನ ಶಿಷ್ಯ ಜನಕೆಶ್ರದ್ಧೆಯಿಂದಲದನು ಎರೆದನ ಕ್ರೋಧದಿಂದಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ 1


ಮಾನನೀಯ ಶೀಲರಾದಮಾನವರನು ಕರೆದು ಹರಿಯಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಪಡೆದಜ್ಞಾನಮತವ ಜನಕೆ ಸಾರ್ದನ, ಶಿಷ್ಯಜನಕೆಸಾನುರಾಗದಿ ತತ್ವಪೇಳ್ದನಜಯ ಮುನೀಂದ್ರನ2


ಸರಸದಿಂದ ಮೂರ್ಯೋಳುವಿರಸ ದುಷ್ಟ ಭಾಷ್ಯಗಳನುಮುರಿದಕ್ಷೋಭ್ಯ ತೀರ್ಥಯತಿಪಕರಸಂಜಾತ ರಮ್ಯಚರಿತಶರಣ ಜನರ ಪೊರೆವ ಯತಿಪನ, ಶಿಷ್ಯಜನರಮರುಳ ಮೋಹತಿಮಿರ ದಿನಪನ, ನಮ್ಮ ಪರಮಗುರು ಶ್ರೀಕೃಷ್ಣ ಪಾದಭಜಕನಜಯ ಮುನೀಂದ್ರನ3

***


No comments:

Post a Comment