..
ಜೀವನ ಗಾಥೆ
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊ ಪುಟ್ಟಿಸಬೇಡವೆನ್ನ ll ಪ ll
ಪಟ್ಟಾಭಿರಾಮನೆ ಪರಮ ಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ll ಅ ಪ ll
ಎಂಬತ್ತುನಾಲ್ಕು ಲಕ್ಷಯೋನಿಯ ಚೀಲಗಳಲಿ ಬಂದೆನೊ
ಕುಂಭಿಣಿಯೊಳು ಪುಟ್ಟಿ ಬಹುಪಾಪಗಳ ಮಾಡಿ ಕುಂಭೀಪಾಕದಿ ಬೆಂದೆನೊ
ಅಂಬುಜಮಿತ್ರನ ಸುತನಾಳುಗಳ ಕೈಲಿ ಅಮಿತಯಾತನೆಗೊಂಡೆನೊ
ಅಂಬುಜನಾಭನೆ ಅಖಿಳ ಸುರರೊಡೆಯನೆ
ಆರ್ತಾರ್ತಿಹರನೆಂದು ಕೇಳಿ ಬಂದೆನು ನಾನು ll 1 ll
ಜೇನಿನೊಳಗೆ ಬಿದ್ದ ನೊಣದಂತೆ ಸತಿಸುತ ಜನಪಾಶ ಬದ್ಧನಾದೆ
ಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆ ಮೋಸ ಹೋದೆನೊ ಬರಿದೆ
ಏಣವು ಕಿಂಕಿಣಿಧ್ವನಿಗೆ ಮರುಳಾದಂತೆ ಇಳೆಯೊಳು ಮಂಕಾದೆನೊ
ಏನೆಂಬೆ ದಾಸರಿ ಕೋಡಗದಂದದಿ
ಕುಣಿಯುವಂತೆ ನಾನೆಲ್ಲ ಜನಗಳ ಮುಂದೆ ll 2 ll
ಕಾಯ ಪೋಷಣೆಗಾಗಿ ಹೇಯ ಕರ್ಮಂಗಳ ಕಾಲಕಾಲದಿ ಮಾಡ್ದೆನೊ
ಜಾಯಾದಿಗಳ ರಕ್ಷಣೆ ಮಾಡೆ ಅದರಿಂದ ಜಾಗರೂಕನಾದೆನೊ
ನ್ಯಾಯ ರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊ
ಕಾಯಜನಯ್ಯನೆ ಶ್ರೀಕೃಷ್ಣರಾಯನೆ
ಕಾಯಬೇಕೆನ್ನಪರಾಧಗಳನು ದೇವ ll 3 ll - ಶ್ರೀವ್ಯಾಸರಾಜರು
***
ಶ್ರೀವ್ಯಾಸರಾಜರು ಯೋಗಿಗಳು - ವಿರಾಗಿಗಳು ಆದರೂ ಸಾಮಾನ್ಯ ಜೀವರು ಈ ಜಗತ್ತಿಗೆ ಹೇಗೆ ಬಂದು, ಹೇಗಿದ್ದು ಏನೂ ಸಾಧಿಸಲಾಗದೆ ಕಾಲವಾಗಿ ಹೀಗೆ ಸಂಸಾರ ಚಕ್ರಕ್ಕೆ ಸಿಲುಕಿ ಪರದಾಡುವರೆಂಬ ಚಿತ್ರವನ್ನು ಕೊಟ್ಟಿರುವರು. ಹೀಗಿರುವ ನಾನು ಮುಂದಿನ ಸದ್ಗತಿ ಪಡೆಯುವುದಾದರೂ ಎಂತು ಎಂಬ ಆರ್ತಭಾವನೆಯನ್ನು ತೋರುವರು. ಇದು ಹುಟ್ಟಿ ಬಂದ ಎಲ್ಲರ ಬವಣೆಯೂ ಆಗಿದೆ. 'ಜೇನಿನೊಳಗೆ ಬಿದ್ದ ನೊಣದಂತೆ' ಆಗಿದೆ ನಮ್ಮ ಜೀವನ. ಕಾಯ ಪೋಷಣೆಗಾಗಿ ಏನೆಲ್ಲಾ ಮಾಡುತ್ತಿರುವೆ. ಯಾವದನ್ನು ವಿಧಿ ಎಂದರೋ ಅದನ್ನು ಮಾಡಲಾಗದೆ ಪೋದೆನೋ ದೇವ ಎನ್ನುವರು. ಶ್ರೀರಾಜರು ನಮ್ಮ ಇತಿ ಗತಿಗಳನ್ನು ಸುಂದರವಾಗಿ ನಮ್ಮ ಮುಂದಿಟ್ಟಿರುವರು. ಇದರ ಆಂತರ್ಯವನ್ನು ಚೆನ್ನಾಗಿ ತಿಳಿದು ಪರಿಹಾರಕ್ಕೂ ಅವರ ಆದೇಶ - ಉಪದೇಶಗಳನ್ನು ಕೇಳೋಣ, ಕೇಳಿ ನಡೆಯೋಣ. ಈ ಎಲ್ಲವನ್ನು ನೆನೆಯುತ್ತ ಕಡೆಯ ಮಾತು 'ಕಾಯಬೇಕೆನ್ನಪರಾಧಗಳನು' ಎನ್ನೋಣ.
***
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ
ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ
ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ
ಅಂಬುಜಮಿತ್ರನ ಸುತನಾಳುಗಳ ಕೈಲಿಅಮಿತಯಾತನೆಗೊಂಡೆÉನೊಅಂಬುಜನಾಭನೆ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1
ಜೇನಿನೊಳಗೆ ಬಿದ್ದ ನೊಣದಂತೆ ಸತಿಸುತ
ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2
ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
***
No comments:
Post a Comment