..
ತುಂಬಿತು ಬೆಳೆದಿಂಗಳು-ಈ ವನದೊಳುತುಂಬಿತು ಬೆಳೆದಿಂಗಳು ಪ
ತುಂಬಿತು ಬೆಳೆದಿಂಗಳೀವನದೊಳಗೆಲ್ಲಅಂಬುಜನಾಥನು ಬಾರ ಕಾಣಕ್ಕ ಅ.ಪ.
ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ ಬಾರ ಕಾಣಕ್ಕ1
ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿದೆಪಟ್ಲ ಜಾಜಿಯ ಮೊಗ್ಗು ಅರಳುತಿದೆಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತುಧಿಟ್ಟತನದ ರಂಗ ಬಾರ ಕಾಣಕ್ಕ 2
ಕಾದ ನೀರು ಎಲ್ಲ ಆರಿ ಹೋಗುತಲಿದೆಕಾಯ್ದ ಮಲ್ಲಿಗೆ ಹೂವು ಬಾಡುತಿದೆಮದನನ ಬಾಧೆಯು ಬಹಳವಾಗಿದೆ ಈಗಮದನನೈಯನು ಕೃಷ್ಣ ಬಾರ ಕಾಣಕ್ಕ3
ಅಡವಿಲಿ ಕೆರೆಕಟ್ಟೆ ಕುಡಿವೋರಿಲ್ಲದೆ ಬತ್ತಿನಡೆವೋರಿಲ್ಲದೆ ದಾರಿ ಹಸಗೆಟ್ಟಿತುಕಾಡಮಲ್ಲಿಗೆ ಹೂವ ಕುಯ್ದು ಮುಡಿವರಿಲ್ಲನೋಡದೆ ಎನ್ನ ಜೀವ ಹಸಗೆಟ್ಟಿತಮ್ಮ 4
ಹಾಸಿದ್ಹಾಸಿಗೆ ಮಂಚ ಹಸಗೆಟ್ಹೋಗುತಿದೆಪೂಸಿದ ಶ್ರೀಗಂಧ ಬೆವರುತಿದೆಲೇಸಾದ ನಮ್ಮೆದೆ ಮಿಂಚೇರುತಲಿದೆವಾಸುದೇವನು ಕೃಷ್ಣ ಬಾರಕಾಣಕ್ಕ 5
ಕಾಯ ಹೊಳವು ಮಾಡಿ ಕುಚವ ಸೋರೆಯಮಾಡಿಮನವೆಂಬ ತಂತಿಯ ಹೂಡಿಕೊಂಡುಎರಡು ಕಂಗಳನ್ನು ಎರಡು ತಾಳವÀ ಮಾಡಿಮೇಳಕೊಪ್ಪುವೆ ರಂಗ ಬಾರ ಕಾಣಕ್ಕ6
ಒಳದೊಡೆ ನಡುಗಿತೆ, ನೆರಿಯು ಹಾರುತಲಿವೆಕಳಕಳಿಸುತಲಿದೆ ಕಳವಳವುಪುಳಕವಾಗುತಲಿದೆ ಕಳೆಯುಗುಂದುತಲಿದೆನಳಿನಾಭನು ಕೃಷ್ಣ ಬಾರ ಕಾಣಕ್ಕ7
***
No comments:
Post a Comment