..
kruti by rukmangadaru
ಕಳದೇವಲ್ಲ ಕೈಗೆ ನಿಲುಕಿದ ನಿಧಾನ |ತಿಳಿದು ಬಿಟ್ಟೆವಲ್ಲ ಸ್ವರ್ಗದ ಸೋಪಾನ ||
ಅಳಿದೆವಲ್ಲ ಆತ್ಮಲೋಕದ ವಿಮಾನ |ಸಲೆಯೆಂಬ ಸಮಯ ತುಂಬಿತಲ್ಸಮಾನಾ ಪ
ಮದ್ದು ಮೇಯಿದಂತೆ ಚಿಂತೆಗಳಿದ್ದು ಸೊರಗಿ |ಕದ್ದು ಕಳ್ಳನಂತೆ ಲೋಕದೊಳು ತಿರುಗಿಬಿದ್ದು ಬೈಸಿಕೊಂಡೆ ಧನಿಕರಲಿ ಮರುಗಿ |ಹದ್ದು ಕಾಗೆಯಂತೆ ಕೂಳ ತಿಂದು ಒರಗಿ1
ಜನದ ಮನದ ನಾಚಿಕೆಗಳೆಲ್ಲ ಬಿಟ್ಟು |ಕನಸಿನಂಥ ವಿಷಯ ಸವಿಗೆ ಸೋಂಕಿ ಕೆಟ್ಟು |ಜನಿಸಿದವರ ಕೂಡ ಮತ್ಸರವ ತೊಟ್ಟು |ಶುನಕನಂತೆ ಬೊಗಳಿ ಬೊಗಳಿ ಗೋಳಿಟ್ಟು 2
ಉಕ್ಕಿ ಸೊಕ್ಕಿ ಸಾಧು ಸಜ್ಜನರ ದೂರಿ |ನಕ್ಕು ನುಡಿದು ಅವರ ದೋಷಗಳ ಬೀರಿ |ಝಕ್ಕಿಸಲರಿಯಾದವರ ಮಾತುಗಳ ಮೀರಿ |ರುಕ್ಮದಾಶೆ ಹಿಡಿಯದೆ ಹೇಡಿತನವ ತೋರಿ 3
***
No comments:
Post a Comment