Wednesday, 4 August 2021

ಸಾಕೊ ಪಾರ್ಥ ನಿನಗ್ಯಾಕೊ ಬಡಿವಾರ ನಿಮ್ಮ ಕೀರ್ತಿಅರಿಯೆವೊ ankita ramesha

 ..

ಸಾಕೊ ಪಾರ್ಥ ನಿನಗ್ಯಾಕೊ ಬಡಿವಾರ ನಿಮ್ಮ ಕೀರ್ತಿಅರಿಯೆವೊಪಾರ್ಥ ಸಾಕೊ ನಿನಗೆಬಡಿವಾರ ಪ.


ಬೀಗನಾಡಿದ ಬಲು ಬಿಂಕದ ಮಾತು ಕೇಳಿ ಸಾಗರಶಯನ ಮುರಿದೆದ್ದಸಾಗರಶಯನ ಮುರಿದೆದ್ದ ಅರ್ಜುನ ಹ್ಯಾಂಗಂದ್ಯೊ ನಿನ್ನ ಮನದಾಗ1

ಏನಲೊ ಅರ್ಜುನ ಈ ನುಡಿ ನಿನಗ್ಯಾಕೊನೀನು ನಿಮ್ಮವಳು ತಿರು ತಿರುಗಿನೀನು ನಿಮ್ಮವಳು ತಿರು ತಿರುಗಿ ಮಾರಿದರೆಕಾಣಿಯ ಬೆಲೆಯ ಹೋಲಲಾರೆ2

ದಶರಥರಾಯನ ಭಾಗ್ಯ ವರ್ಣಿಸಲು ವಶವಲ್ಲಹೊಸದಾಗಿ ಇವಳು ಹೋಗಲಿಕ್ಕೆಹೊಸದಾಗಿ ಇವಳು ಹೋಗಲಿಕ್ಕೆ ಎನಗೆ ಈ ದೆಶೆಗೇಡಿ ಬಂದು ದಣಿಸಲಿಲ್ಲ 3

ಹಿಂದೆ ಇವಳಿಂದಲೆ ನೊಂದೆನೋ ಅನ್ನಕ್ಕೆ ಸಂದೇಹವಾಗಿ ಅಡವಿಯಸಂದೇಹವಾಗಿ ಅಡವಿಯ ತಿರುಗಿಸಿದವಳಿಗೆ ಅಂದಣ ಆನೆ ಬರಲುಂಟೆ 4

ಬಾಲೆ ವಾಲ್ಮೀಕನ ಆಲಯದಲ್ಲಿದ್ದಾಗ ಮೇಲು ವಸ್ತ್ರವು ಇಲ್ಲ ಅಶನಿಲ್ಲಮೇಲ್ವಸ್ತ್ರ ಇಲ್ಲ ಅಶನಿಲ್ಲದಾಗ ಇವಳ ಕಾಲ ಲಕ್ಷಣವೆಲ್ಲಿ ಅಡಗಿತ್ತೆ 5

ಅಕ್ಷ ಮ್ಯಾಲಂತರದಿ ವೃಕ್ಷದಲ್ಲಿದ್ದಾಗ ಲಕ್ಷ ಕಷ್ಟಗಳ ಬಡುವಾಗಲಕ್ಷ ಕಷ್ಟಗಳ ಬಡುವಾಗ ಇವಳ ಕೈಯ ಲಕ್ಷಣವೆಲ್ಲಿ ಅಡಗಿತ್ತೆ 6

ನಿಮ್ಮವರ ಬಡಿವಾರ ಬಮ್ಮ ವರ್ಣಿಸಲಾರ ಹೆಮ್ಮಿ ನೋಡಿದರೆ ವಿಪರೀತಹೆಮ್ಮಿ ನೋಡಿದರೆ ವಿಪರೀತ ಎಲೊ ಪಾರ್ಥಸುಮ್ಮನೆ ಯಾಕೆ ಮುನಿಸಾಗಿ 7

ಕೇಳಿ ನಿಮ್ಮವರ ಕೀರ್ತಿ ಭಾಳೆ ವಿಸ್ತಾರವಾಗಿ ಹೇಳಲು ಲಜ್ಜೆ ಬರತದೆ ಹೇಳಲು ಲಜ್ಜೆ ಬರ ತದೆ ನಮ್ಮ ಅಮ್ಮನ ತಾಳುವಿಕೆಯಿಂದ ಉಳಿದಾರೊ 8

ನಾರು ವಸ್ತ್ರವನುಟ್ಟು ನಾರಿ ಸಂಚರಿಸುವಾಗವೀರ ರಾಮೇಶ ಜರಿದಾಗ ವೀರ ರಾಮೇಶ ಜರಿದ ಕಾಲಕ್ಕೆ ಇವಳ ಮೋರೆ ಲಕ್ಷಣವು ಅಡಗಿತು9

****

No comments:

Post a Comment