Wednesday, 4 August 2021

ಚಿತ್ತಜನೈಯನ ಕೂಡ ಅರ್ಥಿಲೆ ಹೋಗುವಾಗ ಹಸ್ತಿನಾವತಿಯ ankita ramesha

 ..

ಚಿತ್ತಜನೈಯನ ಕೂಡ ಅರ್ಥಿಲೆ ಹೋಗುವಾಗ ಹಸ್ತಿನಾವತಿಯ ಕಂಡರು ಜತ್ತಾಗಿ ಜನರು ಪ.


ನದ ನದಿಗಳ ದಾಟಿ ಮುದದಿಂದ ಮುಯ್ಯಕ್ಕೆ ಬರಲು ಅದ್ಭುತವಾಗಿ ಬೆಳಗೋದೆಅದ್ಭುತವಾಗಿ ಬೆಳಗೋದೆ ನಗರಿಯುಇದೇ ವೈಕುಂಠ ಹೌದೇನ1

ಸಾಲು ವನಗಳ ನೋಡ ಸರಳ ಕಾವಲಿ ನೋಡ ತರಣಿ ಸರೋವರ ಇವ ನೋಡ ತರಣಿ ಸರೋವರ ಇವ ನೋಡಗಗನಕ್ಕೆ ಸರಳಾಗಿ ಬೆಳೆದ ಮರನೋಡ2

ಆಲ ಅಶ್ವತ್ಥ ಶಾಲ ಶಾಬರವೃಕ್ಷ ಸಾಲು ಮಂಟಪ ನೋಡ ಸಾಲು ಮಂಟಪ ಇವ ನೋಡ ದೇವಾಲಯವು ವಿಶಾಲವಾಗಿದ್ದ ಬಗಿ ನೋಡ3

ಪ್ಯಾಟಿ ಬಾಜಾರ ಸಾಲು ಥಾಟಾಗಿ ತೋರುವುದೆ ಕೋಟಿ ಸೂರ್ಯರ ಬೆಳಕಿಲೆಕೋಟಿ ಸೂರ್ಯರ ಬೆಳಕಿಲೆ ಒಪ್ಪೊ ನಗರಿಯ ಮಾಟ ವರ್ಣಿಸಲು ವಶವಲ್ಲ4

ಹತ್ತಿ ಗೋಪುರ ಕೋಟಿ ಹಚ್ಚಿದೆ ಧ್ವಜ ಕೋಟಿಮತ್ತ ಪತಾಕೆಗೆ ಮಿತಿ ಇಲ್ಲಮತ್ತ ಪತಾಕೆಗೆ ಮಿತಿಯಿಲ್ಲ ಹರಿಣಾಕ್ಷಿಸತ್ಯ ಲೋಕವು ಹೌದೇನ5

ಅಟ್ಟಾಲದ ಮ್ಯಾಲೆ ಧಿಟ್ಟಾದ ಗೊಂಬೆಗಳು ಕೃಷ್ಣಗೆ ಕೈಯ್ಯ ಮುಗಿವಂತೆ ಕೃಷ್ಣಗೆ ಕೈಯ್ಯ ಮುಗಿವಂತೆ ನಿಲ್ಲಿಸಿದ್ದುಎಷ್ಟು ವರ್ಣಿಸಲು ವಶವಲ್ಲ6

ಜತ್ತಾದ ಮನೆಗಳಿಗೆ ರತ್ನದ ಶೋಭೆ ನೋಡಹತ್ತು ದಿಕ್ಕುಗಳ ಬೆಳಗೋವೆÉಹತ್ತು ದಿಕ್ಕುಗಳ ಬೆಳಗೋವೆÉ ಸ್ವರ್ಗವಎತ್ತಿಟ್ಟರೇನ ಐವರು7

ಚಂದದ ಮನೆಗಳಿಗೆ ಮುತ್ತಿನ ಹಂದರ ತೋರಣUಳೆಷ್ಟುಶ್ರೀ ಗಂಧದ ಥಳಿಯ ಸೊಬಗೆಷ್ಟುಶ್ರೀ ಗಂಧದ ಥಳಿಯ ಸೊಬಗೆಷ್ಟ ರಂಗವಾಲಿಅಂದವಾಗಿದ್ದ ಜಗುಲಿ ಎಷ್ಟ 8

ತಾರಕ್ಕಿ ಹೊಳವಂತೆ ತೋರೋದೀವಿಗೆ ಎಷ್ಟನೀರೆ ನಿಲಿಸಿದ್ದ ಕನ್ನಡಿ ಎಷ್ಟನೀರೆ ನಿಲಿಸಿದ್ದ ಕನ್ನಡಿ ಎಷ್ಟ ಉಪ್ಪರಿಗಿಏರಿ ನೋಡುವ ಜನರೆಷ್ಟ 9

ಶ್ರೀಶನ ಮುಖವನೆ ಸೋಸಿಲೆ ನೋಡುತ ಈಜಾಡಿ ಸುಖದ ನದಿಯೊಳು ಈಜಾಡಿ ಸುಖದ ನದಿಯೊಳುಬಹುಜನ್ಮಕ ಲೇಸಾದ ಪುಣ್ಯ ಫಲಿಸಿತು10

ಮೇಲಾದ ಮನೆಗಳ ಮ್ಯಾಲೆ ಸಾಲು ಗೊಂಬಿಗಳ ನೋಡ ಶ್ರೀಲೋಲ ರಾಮೇಶಗೆ ಕೈ ಮುಗಿವಂತೆಶ್ರೀಲೋಲ ರಾಮೇಶಗೆ ಕೈ ಮುಗಿದುಹರಿಣಾಕ್ಷಿ ಕಾಲಿಗೆ ಎರಗುವ ಪರಿಯಂತೆ 11

***


No comments:

Post a Comment