Thursday 2 December 2021

ಸ್ವಾಮಿ ಬಂದನು ಸತ್ಯಭಾಮೆ ರುಕ್ಮಿಣಿಯರಿಂದ ಕಾಮಿತ ankita ramesha SWAMI BANDANU SATYABHAAME RUKMINIYARINDA KAAMITA



ಸ್ವಾಮಿ ಬಂದನು ಸತ್ಯಭಾಮೆರುಕ್ಮಿಣಿಯರಿಂದ ಕಾಮಿತ ಫಲವ ಕೊಡುತಲೆ ಪ.


ತಂದೆ ವಾಸುದೇವ ತಾಯಿ ದೇವಕಿದೇವಿಎಂಭತ್ತುಕೋಟಿ ಯಾದವರುಎಂಭತ್ತುಕೋಟಿ ಯಾದವರು ಬರುತಾರೆ ತೊಂಭತ್ತು ಮಹಲು ತೆರವಿರಲಿ 1


ಸರ್ಪಶಯನನ ಬದಿಯಲೊಪ್ಪುತ ಬಲರಾಮ ಛಪ್ಪನ್ನ ಕೋಟಿ ದ್ವಿಜರಿಂದ ಛಪ್ಪನ್ನ ಕೋಟಿ ದ್ವಿಜರಿಂದ ಬರುತಾರ ಎಪ್ಪತ್ತು ಮಹಲು ತರವಿರಲಿ 2


ರಂಗ ಬಂದನು ಸಖಿ ಮಂಗಳಾರುತಿಯ ತಾರೆ ಕಂಗಳಿಗೆ ಸೂರ್ಯ ಹೊಳೆವಂತೆಕಂಗಳಿಗೆ ಸೂರ್ಯ ಹೊಳೆವಂತೆ ಗರುಡನೇರಿಅಂಗಳಕ ಬಂದ ನರಹರಿ 3


ನಾಗಶಯನನು ಬಂದ ಬೇಗಆರುತಿ ತಾರೆ ನೂರು ಸೂರ್ಯರ ಬೆಳಕಿಲೆ ನೂರು ಸೂರ್ಯರ ಬೆಳಗೊ ಗರುಡನೇರಿಬಾಗಿಲಿಗೆ ಬಂದ ಯದುಪತಿ4


ಮದಗಜಗಮನೆ ಬ್ಯಾಗ ಕಡಲಾರತಿಯ ತಾರೆ ಚದುರೆ ನೀ ತಾರೆ ಫಲಗಳಚದುರೆ ನೀ ತಾರೆ ಫಲಗಳ ಐವರಿಗೆ ಎದುರಿಗೆ ಬಾರೆಂದು ಕರಿಯಮ್ಮ 5


ಕೃಷ್ಣರಾಯನು ಬಂದ ಬುಕ್ಕಿಟ್ಟು ಸೂರ್ಯಾಡೆಅಷ್ಟ ಸೌಭಾಗ್ಯ ಇವು ನೋಡಅಷ್ಟ ಸೌಭಾಗ್ಯ ಇವು ನೋಡ ಮಾಡಿದ್ದುಎಷ್ಟು ಸುಕೃತವು ಸ್ಮರಿಸಮ್ಮ6


ಶ್ರೀದೇವಿಯರಸು ಬಂದ ಕೇದಿಗೆ ಮಲ್ಲಿಗೆ ತಾರೆ ಆದರದಿತಾರೆ ತುಳಸಿಯ ಆದರದಿತಾರೆ ತುಳಸಿಯ ಅಕ್ಷತೆಯಿಂದ ಮಾಧವ ರಾಮೇಶನ ಉಪಚರಿಸೆ7

****


No comments:

Post a Comment