..
ರಂಗನಂಗದ ಸಂಗ ಸುಖ ನೋಡ ಅಂಗನೆಲಕುಮಿಯ ಸಂಗದುರ್ಲಭವೆಈಅಂಗನೆಯರು ಮಾಡಿದ ಸುಕೃತವಂತೆ ಪ.
ಗುಂಗುರಗೂದಲ ಮ್ಯಾಲೆ ಭೃಂಗದ ಮರಿಗಳು ರಂಗನ ಮುಖದ ರಸವನೆರಂಗನ ಮುಖದ ರಸವನೆ ಸÀವಿದುತಮ್ಮಂಗವ ಮರೆತು ಕುಳಿತಾರೆ ಬ್ರಹ್ಮಾದಿ ವಂದ್ಯ1
ಪಂಕಜನಾಭಗೆ ವಂಕಿ ಬಾಪುರಿ ಇಟ್ಟುಕಂಕಣ ಕಡಗ ಮೊದಲಾಗಿಕಂಕಣ ಕಡಗ ಮೊದಲಾಗಿ ರಂಗಗೆಅಲಂಕಾರ ಮಾಡಿ ಕೆಲದೆಯರು2
ಪಂಚಬೆರಳಿಗೆ ತಕ್ಕ ಮಿಂಚು ಮುದ್ರೆಗಳಿಟ್ಟುಪಂಚರತ್ನದಲಿ ರಚಿಸಿದಪಂಚರತ್ನದಲಿ ರಚಿಸಿದ ವಡ್ಯಾಣಕೆಂಚೆಯರು ಇಟ್ಟು ನಡುವಿಗೆ 3
ಶ್ರೀದೇವಿ ಅರಸಗೆ ಕ್ಯಾದಿಗೆ ಮುಡಿಸುತಊದಿನ ಕಡ್ಡಿಪರಿಮಳಊದಿನ ಕಡ್ಡಿಪರಿಮಳ ಮೂಸುತಮೋದ ಬಡುವವರು ಕಡೆಯಿಲ್ಲ4
ನೀಲವರ್ಣನ ಮುಂದೆ ಸಾಲು ದೀವಿಗೆಯಿಟ್ಟುಮ್ಯಾಲೆ ಚಾಮರವ ಸುಳಿಸುತಮ್ಯಾಲೆ ಚಾಮರವ ಸುಳಿಸುತಶಿರಮ್ಯಾಲೆ ಪೂಮಳೆಯ ಗರೆದಾರು 5
ಚಲ್ವ ರಂಗನ ಮುಂದೆ ಜಲಪಾತ್ರೆಯನ್ನಿಟ್ಟುಎಲೆಅಡಕಿ ತಬಕ ಫಲಗಳು ಎಲೆಅಡಕಿ ತಬಕ ಫಲಗಳ ತಂದಿಟ್ಟುಕೆಲದೆಯರು ಕೈಯ ಮುಗಿದಾರು 6
ಅಪಾರ ಮಹಿಮಗೆ ಧೂಪಾರತಿಯನೆತ್ತಿಭೂಪರಾಮೇಶ ಸಲುಹೆಂದುಭೂಪರಾಮೇಶ ಸಲುಹೆಂದುಗೋಪಾಲಕೃಷ್ಣಯ್ಯನ ಎದುರಲಿ ನಿಂತಾರು 7
****
No comments:
Post a Comment