Wednesday, 4 August 2021

ಕೋಲ ಕೋಲೆನ್ನ ಕೋಲ ಕೃಷ್ಣಯ್ಯನ ನೆನೆದೇವ ಕೋಲ ankita ramesha

 ..

ಕೋಲ ಕೋಲೆನ್ನ ಕೋಲ ಕೃಷ್ಣಯ್ಯನ ನೆನೆದೇವ ಕೋಲ ಪ.


ಶಿರವ ದೂಗಿದನೆ ಬ್ರಹ್ಮ ದೂಗಿದನೆಮಂದಗಮನೆಯರ ಭಾಗ್ಯ ಚಂದ್ರ ಸೂರ್ಯರಿಗಿಲ್ಲಇಂದ್ರಗೆ ಇಲ್ಲವೆಂದು 1


ಲೋಕನಾಯಕಗೆ ಏಕಾರತಿಯನೆತ್ತಿ ಗೋಕುಲಾಧೀಶ ಸಲುಹೆಂದುಗೋಕುಲಾಧೀಶ ಸಲುಹೆಂದು ಕೈಮುಗಿದುಏಕೋಭಾವದಲಿ ಕೆಲದೆಯರು2

ಭೂಮಂಡಲಪತಿ ಮುಂದೆ ಮಂಡಲ ಮಾಡಿಅನ್ನಭಾಂಡವ ತಂದು ಇಟ್ಟಾರುಅನ್ನಭಾಂಡವ ತಂದಿಟ್ಟು ಕೈಮುಗಿದಾರುಪುಂಡರಿಕಾಕ್ಷ ಕೈಕೊಳ್ಳೊ 3

ತುಪ್ಪ ಸಕ್ಕರಿಯಲಿ ಪಕ್ವಾದ ಭಕ್ಷ್ಯಮಿತ್ರೆಯರು ತಂದು ಇಡುವೋರುಮಿತ್ರೆಯರು ತಂದಿಟ್ಟು ಕೈಮುಗಿದಾರುಭಕ್ತವತ್ಸಲನೆ ಕೈಕೊಳ್ಳೊ4

ಯಾಲಕ್ಕಿ ಕಸಕಸಿ ಮೇಲಾದ ಪಾಯಸ ಬಾಲೆಯರು ತಂದು ಇಡುವೋರುಬಾಲೆಯರು ತಂದಿಟ್ಟು ಕೈಮುಗಿದಿಹರುಬಾಲಗೋಪಾಲ ಕೈಕೊಳ್ಳೊ5

ಫಲದಿಂದ ಪಕ್ವಾದ ಹಲವು ಪದಾರ್ಥಕೆಲದೆಯರು ತಂದು ಇಡುವೋರುಕೆಲದೆಯರು ತಂದಿಟ್ಟು ಕರ ಮುಗಿದಿಹರುಸುಲಭ ಮೂರುತಿಯೆ ಕೈಕೊಳ್ಳೊ6

ಭೇರಿ ಮೊದಲಾದ ಭೋರೆಂಬೊ ತುತ್ತೊರಿವಾರುಜ ಗಂಟೆ ಮೊದಲಾಗಿವಾರುಜ ಗಂಟೆ ಮೊದಲಾಗಿ ರಂಗನಸಾರುತಲಿವೆ ಸಭೆಯೊಳು 7

ಪಟ್ಟಿದರಸಿಯರು ಇಟ್ಟ ಪದಾರ್ಥವದೃಷ್ಟಿಲಿನೋಡಿ ಸುಖಿಸುತದೃಷ್ಟಿಲಿನೋಡಿ ಸುಖಿಸುತ ಅವರಿಗೆಕೊಟ್ಟಾನು ಬ್ಯಾಗ ಕೈವಲ್ಯ8

ನಿತ್ಯ ಪ್ರಕಾಶಗೆ ಮುತ್ತಿನಾರುತಿಯಸತ್ಯಭಾಮೆಯರು ಮೊದಲಾಗಿಸತ್ಯಭಾಮೆಯರು ಮೊದಲಾಗಿ ಬೆಳಗಿದರುಮತ್ತ ರಾಮೇಶ ಸಲುಹೆಂದು9

****


No comments:

Post a Comment