Wednesday, 4 August 2021

ಕೋಲ ಕೋಲೆನ್ನಿ ಮುತ್ತಿನ ಕೋಲ ಕೋಲೆನ್ನಿಆ ಬಾಲೆ ankita ramesha

ಕೋಲ ಕೋಲೆನ್ನಿ ಮುತ್ತಿನ ಕೋಲ ಕೋಲೆನ್ನಿಆ ಬಾಲೆ ಭಾವೆಯ ಈಗ ಸೋಲಿಸಿದೆವೆನ್ನಿ ಪ.


ಕೊಟ್ಟುತಾ ಮುಯ್ಯ ರುಕ್ಮಿಣಿಗೆ ಇಟ್ಟರು ಆಣಿಯಥಟ್ಟನೆ ತಿರುಗಿಸದಿದ್ದರೆ ಕೃಷ್ಣ ನಿಮ್ಮಯ ಅ.ಪ


ತಂದ ಮುಯ್ಯವ ಹಿಂದಕೆ ತಿರುಗಿಸದಿದ್ದರೆಇಂದಿರಾಪತಿಭಾಮೆಗೆ ತಂದೆಯಾಗುವ1

ಬಾಲಿಯರು ಆಣೆಯ ಮೇಲೆ ಮೇಲೆ ಇಟ್ಟರೆಆಲಿಸಿ ಕೇಳುತ ರೋಹಿಣಿ ಬಾಲ ನಕ್ಕನು2

ಇಂಥ ಆಣೆಗೆ ಭಾಮೆ ಇನ್ನೆಂತು ಮಾಡುವಿಪಂಥಗಾರಳೆ ಬಂದು ಚಿಂತಿಸೆಂದನು 3

ಭದ್ರೆ ದ್ರೌಪತಿ ತಿದ್ದಿ ಆಣೆ ನಿಟ್ಟರೆಮುದ್ದು ರಾಮೇಶ ಇದಕೆ ಬಿದ್ದು ನಕ್ಕನು 4

****


No comments:

Post a Comment