ಆರತಿ ಮಾಡುವರು ಜನರು
ಮಾರುತನ ಪಿತಗೆ
ಕೀರುತಿ ಕೊಂಡಾಡುತಲೆ
ದ್ವಾರಕೆಯ ಅರಸಗೆ ಪ.
ಸುರೂಪಿಸೀರೆಯನುಟ್ಟು
ಥೋರ ಮುತ್ತನೆ ಕಟ್ಟಿ
ತೇರಿನಾರುತಿಯ
ಮುರಾರಿಯ ಮುಂದೆತ್ತುವರು1
ರಂಜಿಸೊಸೀರೆಯನುಟ್ಟು
ಪಂಜರ ದ್ವಾಲೆನಿಟ್ಟು
ಕಂಜಾಕ್ಷ ಕೃಷ್ಣಗೆ
ನೀರಾಂಜನ ಎತ್ತಿದರು 2
ನಾಲ್ಕು ಜನರ ದೃಷ್ಟಿ ಹರಿಗೆ
ತಾಕೀತೆಂದು ಕೆಲರು
ಓಕುಳಿ ನಿವಾಳಿಸುವರು
ಲೋಕನಾಯಕಗೆ 3
ಕೃಷ್ಣರಾಯನ ಮುಖಕೆ
ದೃಷ್ಟಿ ನೆಟ್ಟೀತೆಂದು ಕೆಲರು
ಬಟ್ಟು ಮುತ್ತು ನಿವಾಳಿಸಿ
ಇಟ್ಟು ಕಸ್ತೂರಿ ಕಪ್ಪು 4
ಮೇಲು ಮನೆಯು ಕದಳಿ ಕಂಬ
ಮ್ಯಾಲೆ ಹಂದರಗಳು
ಸಾಲು ಜಗಲಿ ತೋರಣ
ವಿಶಾಲ ಬೀದಿಯೊಳು 5
ವ್ಯಾಳಾಶಯನಗೆ ನಿವಾಳಿಸಿ
ಬಾಳೆ ಹಣ್ಣು ಒಗೆದು
ನಾರಿಕೇಳ ನಿವಾಳಿಸಿ
ನಾಲ್ಕು ಕಡೆಗೆ ಒಗೆದು6
ಸಾವಿರ ಅಂಗಡಿಗಳು
ಸಾಲು ಬೀದಿಯೊಳು
ಶ್ರೀಲೋಲ ರಾಮೇಶನ ಭಕ್ತರು ವಾಲೈಸುವರು ಹೀಗೆ7
****
No comments:
Post a Comment