.. ..
ಶಕುನವೆ ಬಲು ಶಕುನವೆ ಸಖ ಕೃಷ್ಣನ ಮುದ್ದು ಮುಖವ ಕಾಂಬುವೆ ನೀಗ ಪ.
ಹಾಲು ಮೊಸರಿನ ಕುಂಭ ಮೇಲಾದ ಘ್ರತÀ ಬೆಣ್ಣಿಸಾಲುಸಾಲಾಗಿ ಎದುರಾಗಿ ಇಂದೀವರಾಕ್ಷಿಸಾಲುಸಾಲಾಗಿ ಎದುರಾಗಿ ರಂಗನ ಕಾಲಿಗೆಶಿರವ ನೀಡುವಂತೆ ಇಂದೀವರಾಕ್ಷಿ 1
ಕೋಟಿ ಜನರು ಕೂಡಿ ತ್ವಾಟ ಪಟ್ಟಿಗಳದಾಟಿ ನೀಟಾದ ಹಂಸ ಗಿಳಿವಿಂಡುನೀಟಾದ ಹಂಸ ಗಿಳಿ ವಿಂಡು ನಡೆದವುಹಾಟಕಾಂಬರನ ದಯವಿದು ಇಂದೀವರಾಕ್ಷಿ 2
ಜತ್ತಾಗಿ ದ್ವಾರಕೆಯ ಹತ್ತಿರ ಬರುತಿರೆಮುತ್ತಿನ ಹೇರು ಇದುರಾಗಿ ಇಂದೀವರಾಕ್ಷಿಮುತ್ತಿನ ಹೇರು ಇದುರಾಗಿ ರಂಗಯ್ಯಹಸ್ತಲಾಘವ ಕೊಡುತಾನೆ ಇಂದೀವರಾಕ್ಷಿ3
ಸಾವಿರ ಅಂಗಡಿ ಸಾಲಾದ ಬಾಜಾರ ನೇರಳೆ ಹಣ್ಣು ಇದುರಾಗಿ ಇಂದೀವರಾಕ್ಷಿನೇರಳೆ ಹಣ್ಣು ಇದುರಾಗಿ ರಂಗಯ್ಯಮೇಲು ಕರುಣದಲಿ ಕರೆಸುವನು ಇಂದೀವರಾಕ್ಷಿ 4
ಹಸ್ತಿನಾಪುರದವರು ಸಪ್ತಪ್ರಾಕಾರ ದಾಟಿಮತ್ತೆ ಶ್ರೀಗಂಧ ಇದುರಾಗಿ ಇಂದೀವರಾಕ್ಷಿಮತ್ತೆ ಶ್ರೀಗಂಧ ಎದುರಾಗಿ ಬಲರಾಮಅರ್ಥಿಲೆ ಬಂದು ಕರೆವÀನು ಇಂದೀವರಾಕ್ಷಿ5
ವ್ಯಾಲಾಶಯನನ ಮನೆಯ ಏಳು ಬಾಗಿಲದಾಟಿಬಾಳೆಯ ಹಣ್ಣು ಇದುರಾಗ ಇಂದೀವರಾಕ್ಷಿಬಾಳೆಯ ಹಣ್ಣು ಇದುರಾಗ ರಂಗಯ್ಯಕೇಳೋನು ಕ್ಷೇಮ ಕುಶಲವ ಇಂದೀವರಾಕ್ಷಿ6
ನಾಗಶಯನನ ಮನೆಯ ಬಾಗಿಲು ಹೊಗಲಿಕ್ಕೆನಾಗಸಂಪಿಗೆಯ ಮುಡಿದವರು ಇಂದೀವರಾಕ್ಷಿನಾಗಸಂಪಿಗೆಯ ಮುಡಿದವರು ಬಂದರು ಈಗರಾಮೇಶನ ದರುಶನಕೆ ಇಂದೀವರಾಕ್ಷಿ 7
****\
****
No comments:
Post a Comment