Thursday, 5 August 2021

ರಜತಪೀಠವೆ ಭೂ ವೈಕುಂಠ ಇಲ್ಲಿ ಮಧ್ವ ಪುಷ್ಕರಿಣಿಯೆ ವಿರಜೆ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ರಜತಪೀಠವೆ ಭೂ ವೈಕುಂಠ

ಇಲ್ಲಿ ಮಧ್ವ ಪುಷ್ಕರಿಣಿಯೆ ವಿರಜೆ

ಅಲ್ಲಿ ರಾಜಿಪರಷ್ಟಮಹಿಷಿಯರು

ಇಲ್ಲಿ ರಾಜಿಪರಷ್ಟಯತಿಗಳು ಪ


ಅಲ್ಲಿ ಎಲ್ಲರೊಳಿರುವದು ಭಕ್ತಿ

ಇಲ್ಲಿ ಎಲ್ಲಿ ನೋಡಲು ವಿರಕ್ತಿ

ಅಲ್ಲಿಪ್ಪ ಜನರಿಗೆ ಮುಕ್ತಿ

ಇಲ್ಲಿ ಎಲ್ಲಿ ನೋಡಿದರಲ್ಲಿ ಭುಕ್ತಿ 1


ಅಲ್ಲಿ ಮತ್ತಿಲ್ಲ ಜನರಿಗೆ ಪುಣ್ಯ

ಇಲ್ಲಿ ಲಭಿಸುವುದೆಲ್ಲವೂ ಪುಣ್ಯ

ಅಲ್ಲಿ ಹೋದವರಿಗಿಲ್ಲಾಗಮನವು

ಇಲ್ಲಿ ಬಂದವರಿಗಿಲ್ಲ ಮರು ಜನನ 2


ಪೂಜೆಯ ವೈಕುಂಠದೊಳಗೆ

ಸರ್ವಜನರು ಮಾಡಬೇಕೆಂದಿಹರು

ರಾಜೇಶ ಹಯಮುಖಕೃಷ್ಣ

ಮಧ್ವಾಚಾರ್ಯರೊಬ್ಬರ ಪೂಜೆಗೊಂಬ 3

***


No comments:

Post a Comment