Sunday, 5 December 2021

ವಿಷ್ಣು ಮೂರ್ತಿಯೆ ಪಾಹಿ ಭುಕ್ತಿ ಪುರೇಶ ಜಿಷ್ಣು ankita rajesha hayamukha VISHNU MOORTIYE PAAHI BHUKTI PURESHA JISHNU



kruti by ವಿಶ್ವೇಂದ್ರತೀರ್ಥರು vishwendra teertharu sode mutt

ವಿಷ್ಣು ಮೂರ್ತಿಯೇ ಪಾಹಿ ಭುಕ್ತಿ ಪುರೇಶ

ಜಿಷ್ಣು ನಂದನ ಸೂತ ವೃಷ್ಣಿಕುಲೇಶ ||ಪ||


ಮೃಷ್ಟಾನ್ನ ಭೋಜನವಿತ್ತ ಸಜ್ಜನರಿಗೆ

ಕಷ್ಟವ ಪರಿಹರಿಸಿಷ್ಟವ ಕೊಡುವಿ

ಶ್ರೇಷ್ಠ ನಾನೆಂಬುವ ಹೆಮ್ಮೆಯುಳ್ಳವರಿಗೆ

ಇಷ್ಟವ ಕೊಡದೇನೆ ದೂರ ಕೂಡಿಸುವಿ ||೧||


ಆರ್ತನಾಗುತ ಬಂದು ಪಾದವ ಸೇರಿದ

ಭಕ್ತರಭೀಷ್ಟವ ಪೂರ್ತಿಗೊಳಿಸುವಿ

ಶಕ್ತ ಅಶಕ್ತನು ಎಂಬ ಭೇದಗಳೆಲ್ಲಿ

ತನ್ನ ಭಕ್ತನೆಂದರೆ ಸಾಕು ಪಾಲಿಸುತಿರುವಿ ||೨||


ಬಾಲಕನಾದರೂ ಕೊಟ್ಟ ನೈವೇದ್ಯವ

ಆಲಸ್ಯವಿಲ್ಲದೆ ಸ್ವೀಕರಿಸಿರುವಿ

ಬಾಲನ ಪಿತ ಬಂದು ಪಾತ್ರವ ಕೇಳಲು

ಜಲದೊಳಗುಂಟೆಂದು ಸ್ವಪ್ನದಿ ನುಡಿದಿ ||೩||


ಬೇಸಿದ ಮಾವಿನ ಫಲದೊಳು ಪ್ರೇಮವೋ

ಬಾಲನ ನುಡಿಯೊಳಗಾಯ್ತೇನೋ ಪ್ರೇಮ

ದಾಸರೊಳು ನಿನಗಿಪ್ಪ ಪ್ರೇಮವ ಜಗಕ್ಕೆಲ್ಲ

ಬಾಲನಿಂದಲಿ ತೋರ್ದೆ ವಿಷ್ಣು ಮೂರುತಿಯೇ ||೪||


ರಾಜೇಶಹಯಮುಖ ಕಿಂಕರಾಗ್ರಣಿ ವಾದಿ

ರಾಜ ರಾಯರಿಗಿಷ್ಟವಿತ್ತು ಪೊರೆದೆ

ಇಷ್ಟದ ಶಿಶುಗಳು ಬೇಡದಿದ್ದರೂ ಮಾತೆ

ಇಷ್ಟವಿತ್ತಂತೆ ನೀ ಪೊರೆಯುವ ದೊರೆಯು ||೫||

***


viShNu mUrtiyE paahi bhukti purESa

jiShNu naMdana sUta vRuShNikulESa ||pa||


mRuShTaanna bhOjanavitta sajjanarige

kaShTava pariharisiShTava koDuvi

SrEShTha naaneMbuva hemmeyuLLavarige

iShTava koDadEne dUra kUDisuvi ||1||


Artanaaguta baMdu paadava sErida

bhaktarabhIShTava pUrtigoLisuvi

Sakta aSaktanu eMba bhEdagaLelli

tanna bhaktaneMdare saaku paalisutiruvi ||2||


baalakanaadarU koTTa naivEdyava

Alasyavillade svIkarisiruvi

baalana pita baMdu paatrava kELalu

jaladoLaguMTeMdu svapnadi nuDidi ||3||


bEsida maavina PaladoLu prEmavO

baalana nuDiyoLagaaytEnO prEma

daasaroLu ninagippa prEmava jagakkella

baalaniMdali tOrde viShNu mUrutiyE ||4||


raajESahayamukha kiMkaraagraNi vaadi

raaja raayarigiShTavittu porede

iShTada SiSugaLu bEDadiddarU maate

iShTavittaMte nI poreyuva doreyu ||5||

***


ವಿಷ್ಣು ಮೂರ್ತಿಯೆ ಪಾಹಿ ಭುಕ್ತಿಪುರೇಶ

ಜಿಷ್ಣು ನಂದನಸೂತ ವೃಷ್ಟಿಕುಲೇಶ ಪ


ಮೃಷ್ಟಾನ್ನ ಭೋಜನವಿತ್ತ ಸಜ್ಜನರಿಗೆ

ಕಷ್ಟವ ಪರಿಹರಿಸೀಷ್ಟವ ಕೊಡುವಿ |

ಶ್ರೇಷ್ಠ ನಾನೆಂಬುವ ಹೆಮ್ಮೆಯುಳ್ಳವರಿಗೆ

ಇಷ್ಟವ ಕೊಡದೇನೆ ದೂರ ಕೂಡಿಸುವಿ 1


ಆರ್ತನಾಗುತÀ ನಿನ್ನ ಪಾದವ ಸೇರಿದ

ಭಕ್ತರಭೀಷ್ಟವ ಪೂರ್ತಿಗೊಳಿಸುವಿ |

ಶಕ್ತ ಅಶಕ್ತನು ಎಂಬ ಭೇದಗಳಿಲ್ಲ

ಭಕ್ತನೆಂದರೆ ಸಾಕು ಪಾಲಿಸುತಿರುವಿ 2


ಬಾಲಕನಾದರು ಕೊಟ್ಟ ನೈವೇದ್ಯವ

ಆಲಸ್ಯವಿಲ್ಲದೆ ಸ್ವೀಕರಿಸಿರುವಿ

ಬಾಲಕ ಪಿತ ಬಂದು ಪಾತ್ರವ ಕೇಳಲು

ಜಲದೊಳಗುಂಟೆಂದು ಸ್ವಪ್ನದಿ ನುಡಿದಿ 3


ಬೇಸಿದ ಮಾವಿನ ಫಲದೊಳು ಪ್ರೇಮವೊ

ಬಾಲನ ನುಡಿಯೊಳಗಾಯ್ತೇನೊ ಪ್ರೇಮ |

ದಾಸರೊಳ್ನಿನಗಿಪ್ಪ ಪ್ರೇಮವ ಜಗಕೆಲ್ಲ

ಬಾಲನಿಂದಲಿ ತೋರ್ದೆ ವಿಷ್ಣುಮೂರುತಿಯೆ 4


ರಾಜೇಶ ಹಯಮುಖಕಿಂಕರಾಗ್ರಣಿ ವಾದಿ-

ರಾಜರಾಯರಿಗಿಷ್ಟವಿತ್ತು ಪಾಲಿಸಿದಿ |

ಇಷ್ಟದ ಶಿಶುಗಳು ಬೇಡದಿದ್ದರು ಮಾತೆ

ಇಷ್ಟವಿತ್ತಂತೆ ನೀ ಪೊರೆಯುವೆ ದೊರೆಯೆ 5

***


No comments:

Post a Comment