..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ವರದರಾಜ ಪಾಲಿಸೆನ್ನ ಧರಣಿಯೊ-
ಳ್ನಿನ್ನಂಥ ರಸಿಕಾಗ್ರೇಸರರುಂಟೆ
ವರದರಾಜ ಪಾಲಿಸೆನ್ನ ಪ
ಕಾಂತೆಯ ಕಾಂತಿಯೊಳಿರುವೆ ನಿನ್ನಯ ಭಾವವರಿಯದ
ರಸಿಕರಾರಿಹರು
ಪರಮ ಪುರುಷ ನಿನ್ನ ಚರಣ ಸೇರಿದ ಭಕ್ತ ಜನರೆಲ್ಲ ರಸಿಕರಾಗಿಹರು 1
ಅಜನ ಪೂಜೆಯ ಕೈಕೊಂಡಿರುವಿ
ದ್ವಿಜವರರಿಗಿಷ್ಟವ ಪಾಲಿಸಿರುವಿ
ಅಜನ ನೀನೆಂದು ತೋರಿಸುವಿ
ಯಜ್ಞಭೋಜನವನ್ನು ಮಾಡುತಿರುವಿ 2
ಚೇತನಾಚೇತನಗಳಿಗೆ ಶ್ರೇಷ್ಠನರಸೂತ ರಾಜೇಶ ಹಯಮುಖ ನಿನ್ನ
ವಾತವಿಧಿ ಹರ ಮುಖ್ಯರು ಭಜಿಸುತಲಿ ನಿತ್ಯ
ಮುಕ್ತರಾದರು ಎಂದೊರೆಯುವುದು ಶ್ರುತಿಯು 3
***
No comments:
Post a Comment