..
kruti by radhabai
ಭಜನೆಯ ಪದ
ಭಕ್ತ ವತ್ಸಲ ಸ್ವಾಮಿ ಭಯನಿವಾರಣ ದೇವ
ಭರದಿಂದ ಬಂದುದ್ಯಾಕೆ ಪೇಳಯ್ಯಾ ಪ
ನೀರೋಳಗೆ ಮುಳುಗುತವನಿ ಭಾರ ಹೊತ್ತು ಬಂದೆಯಾ
ಕೋರೆದಾಡಿಗಳಿಂದ ಧಾರೂಣಿ ಎತ್ತೀ ತಂದು
ಭಾರ ವಾಯಿತೆಂದು ಬಂದೆಯಾ 1
ಬಾಲಕಾನಾ ನುಡಿಯ ಕೇಳಿ | ಬೇಗದಿಂದಾ ಬಂದೆಯಾ
ದುರುಳನ್ನ ಕೊಂದು ಕರುಳ ಮಾಲೆಯಧರಿಸಿ ನೀ
ತರಳಗಭಯವಿತ್ತು ಬಂದೆಯಾ2
ಬಲಿಯ ದಾನಾಬೇಡಿ ನೀನು ಕೊಡಲಿ ಪಿಡಿದೂ ನಿಂತೆಯಾ
ಮಡದಿಯಾ ಕದ್ದವನ ಬಿಡದೆ ಬೆನ್ನಟ್ಟಿಕೊಂಡು
ಸಡಗರದಲಿ ನೀ ಬಂದೆಯಾ 3
ಮಧರೇಲಿ ಹುಟ್ಟಿ ಮಲ್ಲಾರ ಮಡುಹೀ
ಮಾವ ಕಂಸನ ಕೊಂದು ಬಂದೆಯಾ
ತಂದೆ ತಾಯಿಗಳ ಬಂಧನ ಬಿಡಿಸೀನೀ
ಆನಂದಿಂದಿಲ್ಲಿ ಬಂದೆಯಾ 4
ವಸನಾ ವಿಲ್ಲದೆ ನೀನು ಪಶುವನ್ನೇರಿಕೊಂಡು ವಸುಧೆಯ
ಒಳಗೆಲ್ಲಾ ತಿರುಗೀದೆಯಾ
ಸ್ಮರಿಸುವ ಜನರಾ ಪೊರೆಯ ಬೇಕೆನುತಲೀ ಅವಸರದಲಿ
ನೀ ಬಂದೆಯಾ5
ಕರಿಯಾ ಮೊರೆಕೇಳಿ ನೀ ತ್ವರಿತಾದಿಂದಾ ಬಂದೆಯಾ ಮ
ಕರಿನ್ನ ಸಂಹರಿಸಿ ಕರಿಯಾನುದ್ಧರಿಸಿ |
ಕರಿವರದನೆಂದೆನಿಸಿಕೊಂಡೆಯಾ 6
ಕಷ್ಟ ಪಡುವಾ ಜನರ ಕಂಡು ಕಡುದಯದಿಂ ಬಂದಿಯಾ
ಪಕ್ಷಿವಾಹನನೇ | ಲಕ್ಷಮಿರಮಣನೆ | ಕಟಾಕ್ಷವನೇ ಬೀರುವಿಯಾ 7
ಹತ್ತವತಾರವ ಎತ್ತಿ ಬೇಸತ್ತು ನೀ ಮತ್ತೆ ನೀನಿಲ್ಲ ಬಂದಿಹೆಯಾ
ಎತ್ತ ಪೋದರು ಸ್ವಾಮಿ ಬಿಟದೆ ನಿನ್ನ ಬೆನ್ನತ್ತಿ
ಬರುವರು ಕಂಡೆಯಾ 8
ಲಕ್ಷ್ಮಿ ಇಲ್ಲದೆ ನಾನಿರೆನೆನುತಲಿ ವೈಕುಂಠ ಬಿಟ್ಟು ಬಂದೆಯಾ
ಹುತ್ತಾದೊಳಗೆ ಇದ್ದು ನೆತ್ತೀಯ ಒಡಕೊಂಡು
ಭಕ್ತಾರ ಸಲಹಲು ಬಂದಿಹೆಯಾ 9
ಎಲ್ಲೆಲ್ಲಿಯೂ ನಿನಗೆ ಸ್ಥಳವಿಲ್ಲವೆನುತಲಿ ಗಿರಿಯ
ಮೇಲೇರಿ ನೀಂತಿರುವಿಯಾ
ಜಗದಲ್ಲೆಲ್ಲ ನಿನ್ನ ಕೀರ್ತಿ ತುಂಬಿರಲಾಗಿ
ಹುಡುಕೀಕೊಂಡಿಲ್ಲೇ ಬಂದಿಹೆಯಾ 10
ಪಾಪನಾಶಿನಿ ಸ್ನಾನ ಮಾಡೋರು | ನಿನ್ನ ಧ್ಯಾನ ಬೇಡೋರು
ಮನದಿಕ್ಷ್ಟಾರ್ಥಗಳ ಸಲಿಸಲು | ಆತೂರದಿಂದಲಿ ಬಂದೆಯಾ 11
ನಾನಾದೇಶಗಳಿಂದ ನಾನಾ ಜನರು ಬಂದು ನಾನಾ
ರೀತಿಗಳಿಂದ ಸೇವಿಸುವರು
ನಡೆಮುಡಿ ಹಾಸೋರು ಅಡಿಗಡಿಗೆ ಗೋರು ಬಿಡದೆ
ನಿನ್ನ ಕೆರಂಡಾಡುವರು 12
ದೂರ ದೂರದಿಂದ ದಾರಿನಡೆದು ಬಂದು ಬಳಲುತ್ತ ನಿನ್ನ
ಬಳಿ ಬಂದಿಹರು
ಅಡ್ಡಬಿದ್ದೂ ನಿನಗೆ ಬಡ್ಡಿಸಹಿತಾ ಕೊಟ್ಟು ಶರಗೊಡ್ಡಿ
ಬೇಡುತಾ ನಿಂದಿಹರೂ13
ಕಂಗಳಿಲ್ಲಾದವರು ಅಂಗಾವಿಕಲದವರು ಭಂಗಾವ
ಪಡುತಲಿ ಬಂದಿಹರು
ಮಂಗಳಮೂರುತಿ ಅವರ ಅಂತರಂಗಾ ತಿಳಿದು
ಸಂತಯಿಸಬೇಕೆನುತ ಬಂದಿಹೆಯಾ14
ಮೂಕ ಬಧಿರಾರೆಲ್ಲ ಸಾಕು ಸಾಕುಗುತ್ತ ಬಳಲುತ್ತ ನಿನ್ನ
ಬಳಿ ಬಂದಿಹರೂ
ವ್ಯಾಕೂಲದಿಂದನೇಕಾ ಪಾಪಗಳನೆಲ್ಲ ನೂಕಿ
ಬೀಸಾಡಲೂ ಬಂದಿರುವಿಯಾ 15
ಕಪ್ಪಾಕಾಣಿಕೆಗಳಾ ತಪ್ಪಾದೆತಂದು ನಿನಗೊಪ್ಪಿಸಬೇಕೆಂದು
ಬಂದಿಹರೂ
ಅಪ್ಪಾ, ನಮ್ಮಪ್ಪಾ, ತಿಮ್ಮಪ್ಪಾ ನೀ ಕಾಯೆಂದು,
ನಿನಗೊಂದಿಸುವರೂ 16
ಲಜ್ಜೇಯ ತೊರೆದು ಕಾಲ್ಗೆಜ್ಜೀಯ ಕಟ್ಟಿಕೊಂಡು
ಹೆಜ್ಜೆಗೆ ನಿನ್ನ ವಂದಿಸುತಲೀ
ನೋಡುತ್ತ ಮನದಣಿ ಪರವಶರಾಗುತ್ತ ಆನಂದ
ಬಾಷ್ಟಗಳ ಸುರಿಸುವರೂ 17
ಗೊವಿಂದ, ಗೋವಿಂದ, ಎಂದೆನುತ್ತಜನ ಆನಂದದಿಂದ
ನಲಿಯುವರೂ
ಆಡುತ್ತಾ ಪಾಡುತ್ತ ನಿನ ಕೊಂಡಾಡುತ್ತ ಕುಣಿ
ಕುಣಿ ದಾಡುವರೂ 18
ಮೋಸಾ ವಿಲ್ಲಿದೆ ಒಂದು ಕಾಸೂಬಿಡದೆ ಹಣ
ದೋಬಿಕೊಳ್ಳುತ ನೀ ನಿಂತಿರುವೇ
ಇಲ್ಲಾ ಎನುತ ಜಿನ ಮಳ್ಳುಮಾತಾಡಿದರೆ
ಯಲ್ಲಾನುಕಸಕೊಂಡು ಕಳುಹುವಿಯೇ 19
ನಿನ್ನ ದರ್ಶನದಿಂದ ಮುನ್ನ ಮಾಡಿದ ಕರ್ಮವೆಲ್ಲಾ
ತೀರೀತೆಂದು ತಿಳಿಯುತಲೀ
ಘನ್ನ ಮಹಿಮಾ ನಿನ್ನ ಮನ್ನಾಣೆ ಪಡೆಕೊಂಡು
ಧನ್ಯರಾದೇವೆನುತ ತೆರಳುತಿಹರೂ 20
ಸಾಲುಸಾಲಾಗಿ ಎಲೆಗಳ ಹಾಕುತ್ತ
ಮೇಲಾದ ಭಕ್ಷಗಳ ಬಡಿಸುವೋರು
***
No comments:
Post a Comment