Thursday, 5 August 2021

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಕಿಂಕರರಿಗೆ ankita raghavendra

 ..

kruti by radhabai

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಪ


ಕಿಂಕರರಿಗೆ ಬಂದ ಸಂಕಟಕಳೆವಾ ಶ್ರೀ

ವೆಂಕಟರಮಣನೆಂಬಾನೆ ಅ.ಪ.


ಸಿರಿಯಿಲ್ಲದರಿಲಾರೆನೆಂದಾತುರದಲಿ ಧರೆಗಿಳಿದಾನೇ

ಪಥದೊಳಗೆಲ್ಲ ಹುಡುಕ್ಯಾನೆ | ವಲ್ಮೀಕ ದೊಳು ಅಡಗ್ಯಾನೇ1

ಭಕ್ತರ ಸಲಹಲುಹೋಮನ ಮಾಡ್ಯಾನೇ ಬಕುಳೆಮಾತಿಗೆ

ಕಂದ ನಾಗ್ಯಾನೇ ನೆತ್ತಿಯ ಒಡ ಕೊಂಡು ನಿಂತಾನೇ ಬಹುವಿಧ

ಯೋಚನೆ ಮಾಡ್ಯಾನೇ2

ಬೇಟೆನಾಡಲು ಹೊರಟ್ಯಾನೆ ದಿಟ್ಟಕುದುರೆಯನೇರ್ಯಾನೇ

ಪಟುತರ ಶ್ರೀಹರಿ ನಡೆದಾನೇ ಮುಂದೆ ಮದಗಜ

ಒಂದನು ಕಂಡ್ಯಾನೇ 3

ಶನೆ ಬೆನ್ನಟ್ಟಿಕೊಂಡು ನಡೆದಾನೇ ಎಲ್ಲೆಲ್ಲಿಯು

ಕಾಣದೆ ಹೋದಾನೇ ಬಿಸಿಲಲ್ಲಿ ಬಳಲುತ ದಣಿದ್ಯಾನೇ ಅಲ್ಲಿ

ಪದ್ಮಾವತಿಯಳ ಕಂಡಾನೇ4

ಮನದಲ್ಲಿ ಹರುಷಿತನಾದಾನೇ ಮಾತನಾಡಲು

ಮುಂದೆ ನಡೆದಾನೇ ಕಲ್ಲುಹಳೆಸುವುದ ಕಂಡಾನೇ ತಡ ಮಾಡದೆ

ಹಿಂದೆ ಸರಿದಾನೇ 5

ಬಕುಳೆ ಮಾತೆಯ ಕರೆದಾನೇ ಸಕಲವೃತ್ತಾಂತವ ತಿಳಿಸ್ಯಾನೇ

ಬೇಗದಿ ಹೋಗಿ ಬಾರೆಂದಾನೇ ಮೌನದಿಂದಲಿ ಮಲಗ್ಯಾನೇ6

ಮಾತೆ ಬರುವುದ ಕಂಡಾನೇ | ಮುದ್ದದಿಂದಲಿ ಎದ್ದುಕುಳಿತಾನೇ

ತಂದ ಶುಭವಾರ್ತೆಯ ಕೇಳ್ಯಾನೇ

ಮಂದಹಾಸದಿಂದ ನಲಿದಾನೇ7

ಬಂಧುಗಳೆಲ್ಲರ ಕರಿಸ್ಯಾನೇ ಮುಂದೆ ಮಾಡಿಕೊಂಡು ನಡೆಸ್ಯಾನೇ

ಮದು ಮಗನಾಗಿ ನಿಂತಾನೆ | ಪದುಮಾವತಿ ಕೈ ಪಿಡಿದಾನೇ 8

ಜಯ ಜಯವೆಂದರು ಸುರಬ್ರಹ್ಮಾದಿಗಳು ವಾಣಿ-ಪಾರ್ವತಿಯರು

ಜಯ ಜಯ ವೆಂದರುಗಗನದಿ ಅಮರರು ಮದುಮಳ

ಮೇಲೆ ಪೂಮಳೆಗರೆದರು 9

ಮಂಗಳವೆನ್ನಿರೆ ಪದ್ಮಿನಿ ಅರಸಗೆ ಪನ್ನಗ ಶಯನಗೆ

ಮಂಗಳವೆನ್ನಿರೆ ಪರಮ ಕಲ್ಯಾಣಗೆ ಮಂಗಳವೆನ್ನಿರೆ ಶ್ರೀ

ವೇಂಕಟ ವಿಠಲಗೆ ಮಂಗಳಾ ಜಯಮಂಗಳಾ10

***


No comments:

Post a Comment