Thursday, 5 August 2021

ಆನಮಿಸುವೆ ಘೃಣಿ ಆದಿತ್ಯ ಸೂರ್ಯ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು


ಶ್ರೀ ಸೂರ್ಯದೇವ ಸ್ತೋತ್ರ


ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ

ಘನ್ನ ದಯಾಳುವಾಗಿಹಿ ಸೂರಿ ಪ್ರಾಪ್ಯ ಪ


ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್

ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ

ಅಮಯ ದೂರ ಸುಗುಣ ಗಣಾರ್ಣವ ದೇವ

ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ 1

ಕೇಯೂರ ಮಕರ ಕುಂಡಲವಾನ್ ಕಿರೀಟಿಯೆ

ದಿವ್ಯಮಾಲಾಮಣಿ ಅರಿದರ ಧಾರಿ

ಅವ್ಯಯಾನಂದ ಚಿತ್ ಚಾಮೀಕರ ವಪು

ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ 2

ಹಿಂಕಾರ ಪ್ರಸ್ತಾವ ಆದಿ ನಮೋ ನಮೋ

ಉದ್ಗೀಥ ಪ್ರತಿಹಾರೋಪದ್ರವ ನಿಧನ

ಉತ್ಕøಷ್ಟ ಸಾಮ ಪ್ರತಿಪಾದ್ಯ ನಾರಾಯಣ

ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ 3

ಭೂತೇಂದ್ರಿಯ ಕರ್ಣಾದಿಗಳಿಗೆ ದೂರ

ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು

ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ

ಒದಗಿಸಿಹ ತನ್ನ ಸೂರ್ಯನೆಂಬೋ ನಾಮ 4

ಸೂರ್ಯದೇವನೆ ದಯಾವಂತನೆ ನಮೋ ನಮೋ

ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ

ಮಹಾದ್ಯುತಿ ತಮೋಘ್ನನೇ e್ಞÁನಾಯುರ್ದಾತ ನೀ

ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ 5

ಗ್ರಹಗಳಲಿ ಆದಿ ಮಾರ್ತಾಂಡ ಸೂರ್ಯ ನೀ

ಅಹರಹ ಎನ್ನಸರ್ವಪೀಡೆಗಳ್ ಕಳೆದು

ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ

ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ 6

ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ

ತ್ರಿವೃತ್ ಉರುಕ್ರಮ ಸೂರ್ಯ ನಿನ್ನ ಪ್ರೀತಿಪಾತ್ರ

ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ

ಕರುಣದಿ ಎನ್ನನು ಎನ್ನವರನು ಕಾಯೋ 7 

***


No comments:

Post a Comment