..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸೇತುಮಾಧವ ಸ್ತೋತ್ರ
ಸೇತುಮಾಧವ ವಿಭುವೇ | ನಿನ್ನಯ ದಿವ್ಯ
ವೃತತಿಜ ಪದಯುಗಳ |
ಸತತ ನಂಬಿದೆ ಎನ್ನ ಹಿತದಿ ಪಾಲಿಸಿ ಸದಾ
ಕೃತ ಕೃತ್ಯ ಧನ್ಯನ ಮಾಡಿ ಸಲಹೋ ಸ್ವಾಮಿ ಪ
ಪುಟ್ಟಿದಾರಭ್ಯ ನಿನ್ನ | ನಾಮವ ಒಂದು |
ತೃಟಿಯು ಭಜಿಸಲಿಲ್ಲವೋ |
ವಿಠ್ಠಲರಾಯ ಪರಮೇಷ್ಟಿಯ ಪಿತ ಎನ್ನ
ಕಷ್ಟಗಳಳಿದು ಸಲಹೋ ಸರ್ವೋತ್ಕøಷ್ಟ ||
ಕೃಷ್ಣ ಕೃಷ್ಣಾವರದ ಅಜಮಿಳ
ಭ್ರಷ್ಟತನವ ಎಣಿಸದೇ ಬಹು
ನಿಷ್ಟ ವಿಪ್ರ ಸುಧಾಮಗೊಲಿದ
ತ್ರಿಧಾಮ ನಮೋ ಮಧ್ವೇಷ್ಟ ಪಾಹಿ 1
ಸೇತು ಸರ್ವಾಶ್ರಯನೇ | ನೀನೊಬ್ಬನೇ |
ಮುಕ್ತಾ ಮುಕ್ತಾಶ್ರಯನು |
ತ್ರಾತನೀನೇವೆ ಯೆಂದರಿತವರ ಭೀತಿಹರ
ಪಾತ ಸರ್ವೋತ್ತಮ ಜಗದೇಕ ಈಶ
ದ್ಯುಧರಾ ಪಾತಾಳ ಸರ್ವಾಧಾರನಾಗಿಹ
ಪ್ರಭುವೇ ನಿನ್ನಯ ಅತಿ ಅಗಾಧಸುಮಹಿಮೆ ಅನಂತವು |
ಮೋದ ಮಯ ದಶ ಶತ ಸಹಸ್ರಾನಂತರೂಪನೇ || 2
ಹೀನಮಂದನು ನಾನೆಂದು | ದೂರನೀ ||
ಎನ್ನ ಮಾಡದೇ ಸಲಹೋ |
ಎನ್ನ ಹಿರಿಯರು ನಿನ್ನಚ್ಛನ್ನ ಭಕ್ತರೋ
ಘನದಯಾಂಬುಧೇ ಗಂಗಾ
ಜನಕ ಪಾವನ ನಾಮಾ |
ಮನೋವಾಕ್ಕಾಯದಿ ನಿಂತು ಎನ್ನೊಳು
ನೀನೆ ಮಾಡಿ ಮಾಡಿಸುವುದೆಲ್ಲ
ನಿನಗೆ ಸುಪ್ರೀತಿಯಾಗಲೋ ಮುಕ್ -
ಕಣ್ಣ ವಿಧಿಪ ಶ್ರೀ ಪ್ರಸನ್ನ ಶ್ರೀನಿವಾಸ ಶ್ರೀಶ ||3
***
No comments:
Post a Comment