..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ನರಸಿಂಹ ಸ್ತೋತ್ರ
ವಂದಿಸು ನರಹರಿಯ ಮನವೆ ವಂದಿಸು ನರಹರಿಯ
ವಂದ್ಯವಂದ್ಯನು ಬಹು ಸುಂದರ ಸುಖಮಯ
ಇಂದಿರರಸ ಅರವಿಂದ ಸುನಾಭನ ವಂದಿಸು ನರಹರಿಯ ಪ
ಸಿಂಧು ಸಂಚರ ಬಹು ಸುಂದರ ಗಿರಿಧರ
ತಂದನು ವಸುಧೆಯ ಕಂದನ ಕಾಯ್ದ ಪು
ರಂದರವರದ ಮುನೀಂದ್ರ ಕುಮಾರ ಕ
ಪೀಂದ್ರಗÉ ಒಲಿದಮರೇಂದ್ರಗೆ ಬೋಧಿಸಿ
ನಿಂದ ದಿಗಂಬರ ಕುಂಭಿಣಿ ಸುರನುತ
ಮಂದರಗಿರಿ ಎತ್ತಿ ಸಿಂಧುವಿಂದಲಿ ಬಂದು
ಅಂಧ ಮೂಢರ ತನ್ನ ಅಂದ ಮೋಹದಿ ಕಟ್ಟಿ
ದಾನ್ತ ಸುರರಿಗೆಲ್ಲ ಚಂದ ಸುಧೆಯನಿತ್ತ
ಇಂದಿರಾಕಾಂತನನಂತ ಸುಗುಣಗಳ
ಚಿಂತಿಸಿ ಯೋಗ್ಯದಿ 1ಕಂದದ ಪ್ರೇಮದಿ
ವಂದಿಸು ನರಹರಿಯ 1
ವೇದಾಂತರ್ಗತ ಬಾದರಾಯಣ ಹರಿ
ಪಾದಾರಾಧಕ ಮೋದ ಸುತೀರ್ಥರ
ಪಾದಾವಲಂಬಕ ಸಾಧು ಸುಮೇಧರ
ಹೃದಯಾಕಾಶದಿ ಪದುಮದ ಮೂಲದಿ
ಸದಮಲಾತ್ಮನಾದಿತ್ಯನುಪೋಲು 2
ವಿಧವಿಧಭಾಸದಿ ಪದೆ ಪದೆ ನೋಡುತ
ವಿಧಿಯ ತಾತನ ಬಹು ಮೋದ ಸುಗುಣಗಳ
ಮುದದಲಿ ಚಿಂತಿಪ ಕೋವಿದ ಹಿರಿಯರ
ಪಾದ ಸುಪಾಂಶುವ ನಿಯಮದಿ ಪೊಂದಿ ನೀ
ಪದುಮೇಶನ ನಿನ್ನ ಹೃದಯದಿ ಚಿಂತಿಸಿ
ವಂದಿಸು ನರಹರಿಯ 3
ನಿಜಸುಖಮಾರ್ಗದಿ ಭಜಕ ಬಾಲಕ ಪೋಗೆ
ಅರ್ಜಿತ ದ್ವೇಷದಿ 3 ಮೂರ್ಜಗ ಶತ್ರು
ಗಜಾದಿಗಳಿಂ ಹೆಜ್ಜೆಜ್ಜೆಗೆ ಬಾಧಿಸೆ
ಧೂರ್ಜಟಸೇವ್ಯ ಜನಾರ್ಧನ ನರಹರಿ
ಗರ್ಜಿಪ ವದನನು ಸಜ್ಜನಪಾಲಕ
ಅಜಸುರರೆಲ್ಲರು ತೇಜೋಮಯ ಅತಿ
ಜ್ವಲಿಸುವ ನಖದಿಂ ದುರ್ಜನ ರಾಜನ
ಜೋಜ್ಜೆಯ ಛೇದಿಸಿ ಭಜಕಗೆ ವರವಿತ್ತು
ಸೃಜ್ಯಾಸೃಜ್ಯರ ಪ್ರಾಜ್ಞನ ಮರೆಯದೆ
ವಂದಿಸು ನರಹರಿಯ 3
ಸೃಷ್ಟ್ಯಾಧೀಶನದೃಷ್ಟನಾಗಿರುತಿಹ
ಸೃಷ್ಟಾಸೃಷ್ಟ ಪ್ರವಿಷ್ಟಾಸೃಷ್ಟನು
ಶಿಷ್ಟರ ಇಷ್ಟ ಸುದೃಷ್ಟಿಯ ಬೀರುತ
ಶಿಷ್ಟರ ಬಹು ವಿಧ ಕಷ್ಟಗಳಳಿದು 4
ಅಭೀಷ್ಟಗಳೀವನು ದುಷ್ಟರ ಶಿಕ್ಷಿಪ
ಭ್ರಷ್ಟಜನರಿಗಿವ ಸ್ಪಷ್ಟನಾಗುವನಲ್ಲ
ಶ್ರೇಷ್ಠೋತ್ತಮ ಪರಮೇಷ್ಠಿ ಜನಕನಿವ
ಕಾಷ್ಟಾಗ್ನಿಯವೊಲ್ ಅದೃಷ್ಟಾದೃಷ್ಟನು
ದುಷ್ಟದೂರ ವಾಸಿಷ್ಠ ಶ್ರೀ ಕೃಷ್ಣನು
ತಿಷ್ಟನು ನಿನ್ನೊಳುತ್ಕøಷ್ಟನೆಂದರಿತು
ವಂದಿಸು ನರಹರಿಯ 4
ಸರಿಪರರಿಲ್ಲದ ಸಿರಿಯರಸನ ಚಾರು
ಚರಣಾರಾಧನ ಪರಸುಖವೀವುದು
ಸಿರಿದೊರೆ ಸುಹೃದನು ಸಿರಿಸಹ ಮೆರೆಯುತ
ಅರಿತ ಸುಜನರನು ಪೊರೆವನು ದಯದಿ
ಮೊರೆಯನು ಲಾಲಿಸಿ ಪೊರೆದನು ಗರ್ಭವ
ಮರೆತು ನಾರಾ ಎಂದ ನರಸುರಗೊಲಿದನು
ಪೊರೆದನು ದಯದಿ ನರಾಧಮ ಎನ್ನನು
ಕರಿವರ ದ್ರೌಪದಿವರದ ವಿಖ್ಯಾತನು
ಸರಸಿಜಭವತಾತ ಪ್ರಸನ್ನ ಶ್ರೀನಿವಾಸ
ಪೊರೆವನು ನೆನೆವರ ಸಿರಿಭೂದೊರೆಯೆಂದು
ವಂದಿಸು ನರಹರಿಯ 5
***
No comments:
Post a Comment