Thursday, 5 August 2021

ಭೇಶ ಸರ್ವೇಶ್ವರ ಶ್ರೀಪತಿಯೇ ಈ ಭಾವ ಸಂವತ್ಸರ ankita prasannashreenivasa

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ಭಾವ ಸಂವತ್ಸರ ಸ್ತೋತ್ರ 

ಭೇಶ ಸರ್ವೇಶ್ವರ ಶ್ರೀಪತಿಯೇ ಈ ಭಾವ ಸಂವತ್ಸರ ನಿಯಾಮಕÀನು ನಮೋ ನಮೋ ಸ್ವಾಮಿ ಪ 


ಇಲ್ಲಿ ಬರುವ ನುಡಿಗಳ ಅರ್ಥ ಅನುಸಂಧಾನಗಳ ಎಲ್ಲ ವೇದ ಆಗಮ ಗಾಯತ್ರಿ ಮಹಾಮಂತ್ರ ಬಾಹ್ಯರಿಗೆ ಅಲ್ಲ ಮೀರುವರಿಗೆ ಒಳ್ಳೇದು ಅಲ್ಲ 1 

ಶ್ರವಣ ಪಠನ ಫಲಮೋಕ್ಷಸಾಧನ ಜ್ಞಾನ ಅವಾಂತರ ಫಲ ಕೀರ್ತಿ ಯಶಸ್‍ಲಾಭ ಕಷ್ಟಕಲುಷÀನಾಶ ವಿವಾದ ಸಂವತ್ ಸಂಜ್ಞಾನ ಅಧೋ ಪ್ರಾಪ್ತಿ ಯಥಾಯೋಗ್ಯ 2 

ಆಂಗೀರಸ ವರುಷ ಶ್ರವಣಕ್ಕೆ ಅನುಕೂಲ ಶ್ರೀ ಭಾವವು ಮನನಕ್ಕೆ ಅನುಕೂಲ ಸಾಧನ ಈಗ ಈ ಭಾವ ಸಂವತ್ಸರ ಉತ್ತಮರೀತಿಯಲ್ಲಿ ಮಾಳು ಸುಧ್ಯಾನಕೆ 3 

ವೇದಪ್ರತಿಪಾದ್ಯ ಸರ್ವೋತ್ತಮ ಸರ್ವಸ್ವಾಮಿಯ ಸಾಕ್ಷಾತ್ಕಾರ ತನ್ನಿಚ್ಛೆ ಇಂದಲೇ ಈವ ಶ್ರೀ ವಿಷ್ಣು ಪ್ರೀತಿಕರ ಸಾಧನ 4 

ಸದಾಗಮದಿಂದಲ್ಲೇ ಯಥಾಯೋಗ್ಯ ಸಂವೇದ್ಯ ವಿಷ್ಣು ತ್ರಯೀಮಯನು ಧರ್ಮಮಯನು ತಪೋಮಯನು ಅವನೇ ಜಗಜ್ಜನ್ಮಾದಿ ಕರ್ತುತ್ಪಾದಿಗಳ ಕಲ್ಯಾಣತಮ ಮಹಿಮೆಗಳ 5 

ಶ್ರದ್ಧಾಭಕ್ತಿಯಿಂ ವಿಶೇಷ ಜಿಜ್ಞಾಸವ ಸೌಶೀಲ್ಯ ಗುಣವಂತ ಅಜಶಂಕರಾದಿಗಳಿಂ ಮಾಡಲ್ಪಟ್ಟ ಷಡ್ಗುಣೋಪಲಕ್ಷಿತ ಅನಂತ ಕಲ್ಯಾಣ ಗುಣರೂಪನಾದ ಭಗವಂತನ ಪ್ರಸಾದ ಲಭಿಸೇ ಸಾಧನಸುಧ್ಯಾನ 6 

ಭಗವಾನ್ ಭೇಶ ಸರ್ವೇಶ್ವರ ಅಜನ ಪಿತ ಪ್ರಸನ್ನ ಶ್ರೀನಿವಾಸ ತನ್ನಿಚ್ಛೆ ಇಂದಲೇ ಸಜ್ಜೀವರಗೀವ ಯೋಗ್ಯತೆ ಅರಿತು ಅಪರೋಕ್ಷ್ಯ ಕರುಣಾಸಮುದ್ರ ಶ್ರೀಪ 7

***


No comments:

Post a Comment