Thursday, 5 August 2021

ಭಾರತೀ ತವ ಚರಣಾಂಬುರುಹವ ನಂಬಿದೆ ಪೊರೆ ಎನ್ನ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಭಾರತಿ ತವ ಚರಣಾಂಬುರುಹವ ನಂಬಿದೆ ಪೊರೆ ಎನ್ನ ಪ


ಹರಿಸಿರಿ ಪ್ರಿಯತರ ಮರುತನ ನಿಜಪತಿ

ಹರ ಶಕ್ರಾದಿಗಳಿಂದಾರಾಧಿತೆ ಅಪ


ಉದಿತ ಭಾಸ್ಕರನ ಪೋಲ್ವ ದ್ಯುತಿಯಿಂದ

ಜ್ವಲಿಸುವೆ ಶುಭಕಾಯೆ

ಹೃದಯಾಂತರ್ಬಹಿ ಶ್ರೀಶನ ಕಾಂಬುವ

ಜ್ಞಾನ ಭಕುತಿಯೀಯೆ ತಾಯೆ 1

ಬಲ ಕರದಲಿ ಜ್ಞಾನ ಊಧ್ರ್ವದಿ

ಅಭಯ ಮುದ್ರೆಯು ಶುಭದ

ಒಲಿವ ಸುವರಮುದ್ರೆ ಪುಸ್ತಕ

ವಾಮದಿ ವಿದ್ಯಾಪ್ರದೆ ಸುಖದೆ 2

ಶತಸುಖಪಿತ ಪ್ರಸನ್ನ ಶ್ರೀನಿ

ವಾಸನು ಸುಖಮಯನು

ಸತತ ಎನಗೆ ಒಲಿವಂತೆ ನೀ

ದಯಮಾಡೆ ಮಾತೆ ಭಾರತಿ ಶರಣು 3

***


No comments:

Post a Comment