Thursday, 5 August 2021

ಪಂಗು ಪುರವಾಸ ಶ್ರೀ ವೆಂಕಟೇಶ ನಿನ್ನ ankita prasannashreenivasa

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಪಂಗು ಪುರವಾಸ ಶ್ರೀ ವೆಂಕಟೇಶ ನಿನ್ನ

ಪಂಕಜಂಘ್ರಿಗಳಲ್ಲಿ ಸತತ ಶರಣಾದೆ

ಪಂಕಜಾಲಯ ಪತಿಯೆ ಪಂಕಜೋದ್ಭವ ಪಿತ

ವೃಷಾಂಕ ಸಂಕ್ರದಾದಿ ಸುಠವಿನುತ ಈಶ ಪ


ಏಳು ತಗ್ಗಿದ ಗುಡ್ಡ ದಾಟಿ ನಿನ್ನಯ ಕ್ಷೇತ್ರ

ಹೇಳುವರು ಮೊಂಡಿಪಾಳಯ ಎಂದು ಅಲ್ಲಿ

ಮಾಲೋಲ ನಿನ್ನಾನುಗ್ರಹದಿ ಕಂಡೆ ನಿನ್ನ

ಚೆಲುವ ಲಿಂಗಾಕಾರ ಶ್ರೀ ವೆಂಕಟೇಶ1

ಸರ್ವ ವೈದಿಕ ನಾಮಲಿಂಗಾತ್ಮಕ ಶಬ್ದ

ಸರ್ವೋತ್ತಮ ವಿಷ್ಣುವಿಗೇವೇ ಮುಖ್ಯದಲಿ

ಅನ್ವಯವು ಎಂಬುದನ್ನು ಸೂಚಿಸುವ ತೆರದಲ್ಲಿ

ದಿವ್ಯ ಲಿಂಗರೂಪ ತೋರಿಸುತಿ 2

ಉತ್ಸವ ಮೂರ್ತಿಗಳೋಳ್ ಶ್ರೀ ಭೂ ಸಮೇತನೀ

ಜ್ಯೋರ್ತಿಮಯ ಜ್ವಲಿಸುತಿ ಅಪ್ರತಿಮಾಂತಸ್ಥ

ವೇಧ ಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ

ವಿಧಿ ಶೇಷ ದೂರ್ವಾಸ ಇಂದ್ರಾದಿ ವಂದ್ಯ 3

***

 

No comments:

Post a Comment