..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ
ನಿತ್ಯ ಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |
ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿ ಹಯ
ವಕ್ತ್ರ ಶ್ರೀರಾಮನಿಗೆ ಪ್ರಿಯತರ ಮಹಂತ ಪ
ಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರು
ಗೋದಾವರಿಯಿಂದ ರಾಯಚೂರು ಪೋಗಿ
ಆ ದೇಶ ಅಧಿಪತಿ ಪೀತಾಸಿಂಗನಿಗೆ
ಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ 1
ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹು
ಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆ
ಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿ
ಬೀಗ ಹಾಕಿತ್ತು ಸ್ವಾಮಿಗಳು ಹೋದಾಗ 2
ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರು
ಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗ
ಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲು
ಶ್ರೀ ಸ್ವಾಮಿಗಳ ಅರಸ ಪೂಜಿಸಿದನು 3
ತರುವಾಯ ಶ್ರೀರಂಗಪಟ್ಟಣಕೆ ಬಂದು
ಶ್ರೀರಂಗನಾಥನ್ನ ಸೇವಿಸಲು ಮುದದಿ
ಶ್ರೀರಂಗಪಟ್ಟಣದ ಅರಸನು ಭಕ್ತಿಯಿಂ
ಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ 4
ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣ
ರಜತ ದಂಡಗಳು ಶ್ವೇತ ಛತ್ರ
ಇಂಥಾವು ಸಂಸ್ಥಾನ ಚಿಹ್ನೆಗಳ ರಾಜನು
ಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ 5
ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿ
ತೀರ್ಥಾಟನ ಮಾಡಿ ಗದ್ವಾಲು ಸೇರಿ
ಮತ್ತೆ ತೋಂಡ ದೇಶದ ಆರ್ಕಾಟಿಗೆ ಹೋಗಿ
ಆದೇಶ ಮಂತ್ರಿಯಿಂದ ಕೊಂಡರು ಸೇವ 6
ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರು
ಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿ
ಶಿಷ್ಯೋದ್ಧಾರಕ್ಕೆ ವಿಜಯ ಮಾಡುತ್ತಿರಲು
ಶ್ರೀ ಸತ್ಯವರ್ಯರು ಬಂದರು ಆರಣಿಗೆ 7
ಆರಣೀರಾಯನು ವೇಂಕಟನು ಸ್ವಾಮಿಗಳ
ಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇ
ವಸ್ತ್ರಾಭರಣ ಹೇಮಾಭೀಷೇಕಾದಿಗಳ
ಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ 8
ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡು
ಹರಿ ಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತ
ಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿ
ಪುರಿ ಜನರು ಜಯ ಘೋಷ ಮಾಡುತಿರಲು 9
ಎನ್ನ ಎನ್ನಂಥವರ ಅನಂತ ಅಪರಾಧಗಳ
ಘನ ದಯದಿ ಕ್ಷಮಿಸಿ ಬಹು ಕೃಪದಿ ಪಾಹೀ
ವನರುಹಾಸನಪಿತ ಮಧ್ವಸ್ಥ ಶ್ರೀಪತಿ
`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 10
***
No comments:
Post a Comment