Wednesday, 1 September 2021

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನುಮತ್ತೊಂದು ಚೋದ್ಯ ಕೇಳಿ ankita neleyadikeshava

...

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನುಮತ್ತೊಂದು ಚೋದ್ಯ ಕೇಳಿಚಿತ್ರದ ಹೂವಿನ ಹವಳ ಕಾಯಾಗುವಅರ್ಥವ ತಿಳಿದು ಹೇಳಿ 1


ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿಬೆಟ್ಟದಿ ಸಾರವನುತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬಹುಟ್ಟು ಬಂಜೆಯ ಮಗನು 2


ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನುದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲುಹೆಣನೆದ್ದು ಕುಣಿದಾಡಿತು 3


ಕಣ್ಣಿಲ್ಲದಾತನು ಕಂಡು ಪಿಡಿದ ಮೃಗಕೈಯಿಲ್ಲದಾತನೆಚ್ಚಮಣ್ಣಲಿ ಹೊರಳುವ ಕಾಲಿಲ್ಲದಾತನುಗಣ್ಯವಿಲ್ಲದೆ ಪಿಡಿದ 4


ಎಲ್ಲರು ಕೇಳಿ ಕನಕ ಹೇಳಿದ ಮಾತಎಲ್ಲರೂ ಗ್ರಹಿಸಿಕೊಳ್ಳಿಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತುಬಲ್ಲಾದಿಕೇಶವನು 5 |

***

 

No comments:

Post a Comment