Tuesday, 3 August 2021

ಬಲ್ಲೀದ ಬೀದಿಯೊಳು ನಿಲ್ಲಾದೆ ಬರುವರು ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ಬಲ್ಲೀದ ಬೀದಿಯೊಳು ನಿಲ್ಲಾದೆ ಬರುವರು |

ಎಲ್ಲಿ ಜನರೆಲ್ಲನೋಡುವರು

ನೋಡುವರು ಗುರುಗಳನಾ | ಪ್ರಹ್ಲಾದನೆಂದು ಹೊಗಳುವರು 1

ಭೂಸುರರು ಬಂದು ವೇದ ಘೋಷಣೆಯ ಮಾಡುವರು |

ದಾಸಜನರೆಲ್ಲ ನೋಡುವರು

ನೋಡುವರುಗುರುಗಳನಾ | ವ್ಯಾಸ

ಮುನಿಯೆಂದು ಹೊಗಳುವರು 2

ಅಂಥವರೆ ಇಂಥವರೆ ಎಂಥವರೆ ಗುರುಗಳು |

ಮಂತ್ರಾಲಯದ ದೊರೆಗಳು

ದೊರೆಗಳು ಕೈಮುಗಿದ ಜನರಿಗೆ | ಚಿಂತೆಯನು

ಬಿಡಿಸಿ ಕಳುಹುವರು 3

ಮಂತ್ರಾಲಯಕ್ಕೆ ಹೋಗಿ | ನಿಂತು ಕೈಮುಗಿಯಲು |

ಎಂಥ ಕÀರುಣಾಳು

ಎಂಥ ಕರುಣಾಳು | ಕೈ ಮುಗಿದ ಜನರಿಗೆ |

ಸಂತಾನಕೊಟ್ಟುಸಲಹುವರು 4

ಬೃಂದಾವನ ದಲಿನಿಂದು ಮೆರೆಯುವರು |

ಬಂದ ಜನರನ್ನು ಪೊರೆಯುವರು

ಪೊರೆಯುವರು | ಜನರು ಶ್ರೀ ರಾಘವೇಂದ್ರ

ನೆಂತೆಂದು ಕರಿಯುವರು 5

ಯಾರಯ್ಯ ಗುರುಗಳು ತೇರಿನಲಿ ಕುಳಿತಿಹರು |

ತೋರಮುತ್ತಿನ ಹಾರವನು

ಮುತ್ತಿನ ಹಾರವನು | ಹಾಕಿದ್ದ ಉತ್ಸವ ಕಂಡು ರಾಯರಿಗೆ

ಕೈಯ ಮುಗಿವೇನು 6

ಸೃಷ್ಟಿಮೇಲಿನ ಜನರು | ಎಷ್ಟು ವರ್ಣಿಸಲಮ್ಮ |

ಮೃತ್ತಿಕಿ ಅಂಗಾರ ಧರಿಸುವರು

ಮಂತ್ರಾಕ್ಷತೆಯಿಂದ | ಕುಷ್ಟ ರೋಗಗಳನೆಲ್ಲ ಕಳೆಯುವರು 7

ತಂದೆ ರಾಘವೇಂದ್ರರ | ನಿಂದು ಸೇವಿಸಲಾಗ |

ವಂಧ್ಯುರಿಗೆ ಕಂದರಾಗುವರು

ಆಗುವರು ಗುರುಗಳು | ಜನರು ಆನಂಧದಿಂದ ಭಜಿಸುವರು 8

ಮಂತ್ರಾಲಯವು ಇನ್ನೆಂತು ವರ್ಣಿಸಲಮ್ಮ |

ಆನಂದಕ್ಕೆ ಅಳವಲ್ಲ

ಅಳವಲ್ಲ ಗುರುಗಳನ | ನಿಂತು ನೋಡುವರ ನೆಲೆಯಿಲ್ಲ 9

ಪ್ರಹ್ಲಾದವರದ ನಿಲ್ಲಾದೆನೆನೆಯುವನೆ |

ಎಲ್ಲದುರಿತಗಳ ಪರಿಹಾರ

ಪರಿಹರಿಸುವ ಲಕ್ಷ್ಮೀ ವಲ್ಲಭ | ನರಸಿಂಹ ವಿಠಲನ ನೆನೆವೇನೆ 10

****


No comments:

Post a Comment