Thursday 2 December 2021

ರಘುನಾಯಕ ನಿನ್ನ ರಾತ್ರಿ ಹಗಲು ನೆನೆವೆ ankita narasimhavittala RAGHUNAAYAKA NINNA RAATRI HAGALU NENEVE



'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865-1950 


ಸೀಸ ಪದ್ಯ


ರಘುನಾಯಕ ನಿನ್ನ ರಾತ್ರಿ ಹಗಲು ನೆನೆವೆ

ರಾಘವಾ ಕೈಪಿಡಿದು ಸಲಹನ್ನನು ಪ


ಸೀತಾ ಮನೋಹರಾ | ಶ್ರೀ ರಾಮಚಂದಿರಾ

ಪಾತಕಾಮೃಗವಳಿದು | ಪರಮಧೀರಾ 1


ಶಬರಿ ಫಲಗಳ ತಿಂದು | ಶಾಶ್ವತಾ ಫಲವಿತ್ತು

ಅಗಣಿತಾಗುಣಧಾಮ | ಆನಂದ ರಾಮ 2


ಸೇತು ಮಾರ್ಗದೊಳಿಂದ | ಆತ ರಾವಣನ ಕೊಂದ

ಸೀತೆಯನು ತಂದ ಪ್ರಖ್ಯಾತಮಹಿಮಾ 3


ಲೋಕದೊಳು ನೇಮ ನಿನ್ನ | ಪಾಪಹರ ನಾಮ

ವಾಲ್ಮೀಕಿ ಜಪಿಸಿದಾ ಶ್ರೀ ರಾಮನಾಮ 4


ಶ್ರೀ ಕಾಂತ ನರಸಿಂಹ ವಿಠಲಾ | ಸ್ವೀಕರಿಸೈಗಂಧವಾದೇವ 5

***


No comments:

Post a Comment