Tuesday, 3 August 2021

ರಾಘವೇಂದ್ರನೆಂದು ನುಡಿದವರಿಗೆ ಅನುರಾಗದಿಸಲಹುವರಾ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ರಾಘವೇಂದ್ರನೆಂದು ನುಡಿದವರಿಗೆ | ಅನುರಾಗದಿಸಲಹುವರಾ

ಭಾಗವತಾ ಪ್ರಿಯ ಯೋಗಿ ಜನನುತ |

ಶ್ರೀ ರಾಘವೇಂದ್ರರಾಯಾ ಪ


ರಾಮಧ್ಯಾನವನು ಮಾಡುತಲನುದಿನ | ಜಯಿಸಿದಿ ರಾಕ್ಷಸರಾ

ರಾಘವೇಂದ್ರನಂಘ್ರಿಗಳನು ಅನುರಾಗದಿ |

ರಾಯರಾವ್ಯಾಧಿಗಳಳಿದು ಸೇವಾ ಕೊಡುತಿಹರಾ

ರಮಾವಲ್ಲಭನಾಶ್ರಯ ಮಾಡಿ | ರಾಜ್ಯವಾಳಿದರೆ ರಾಘವೇಂದ್ರ 1


ಘಾತುಕ ದನುಜನ ಕಾಲವಿದೆಂದು ಎಣಿಸದೆ ಕಲಿಯುಗ

ಘನ ಪರಾಕ್ರಮದಿಂದ ಮೆರೆಯುವಿ | ಸುಯತೀಂದ್ರ ನೀ

ಘನ ಜಾಡ್ಯಗಳ ಕಳೆದು ಜನರಿಗೆ ಸುರಿಸಿದಿ ಸುಖಮೇಘ

ಘಾ ಬುರಿಯಿಂದಲಿ ಬಂದ ಆತುರರಿಗೆ ಕಳದಿರೊ ನೀ ಅಘವಾ 2


ವೇದಶಾಸ್ತ್ರ ಪಾರಾಯಣ ಮಾಡುತ | ವೃಂದಾವನ ದೊಳಿರುವೇ

ವ್ಯಥೆಯಿಂದಲಿ ಬಂದಾ ತುರರಿಗೆ | ಅತಿಸುಖವನು ಸುರಿವೇ

ವೇದವ್ಯಾಸರು ಮೊದಲಾದರೊಳು | ಆಧಾರದೊಲಿರುವೇ

ವೇಷತಾಳಿ ನೀ ಯತಿಯಾಗಿ ಈ ಜಗದೊಳುನೀ ಮೆರೆವೆ 3


ಭ್ರಮ ತಪ್ಪೀದಂತೆ ಭವದೊಳು ಬಿದ್ದು |

ಬಿಡುವೆನುರಾಘವೇಂದ್ರಾ

ದ್ರಾವಿಡ ಬಡಗ ಮತ್ಸ್ಯ ಮೊದಲಾದವರೊಳು |

ದ್ರಾಕ್ಷಾಫಲದಂತೆ

ಮಧುರವು ತೋರಿಸಲಹೊಗುಣಸಾಂದ್ರಾ ದ್ರವ್ಯ ಪತಿಸಿರಿ

ನರಸಿಂಹ ವಿಠಲನ ತೋರೋದಯದಿಂದ ನೀರಾಘವೇಂದ್ರಾ 4

***


No comments:

Post a Comment