Tuesday, 3 August 2021

ಕಂಡೆ ಸ್ವಾದಿ ಪುರರಾನ ಕೊಂಡಾಡುವೆ ವಾದಿರಾಜ ಗುರುಗಳನಾ ankita narasimhavittala vadiraja stutih

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ವಿಶೇಷ ಸಂದರ್ಭ


ಕಂಡೆ ಸ್ವಾದಿ ಪುರರಾನ | ಕೊಂಡಾಡುವೆ

ವಾದಿರಾಜ ಗುರುಗಳನಾ ಪ


ಭೂತಪ್ರೇತವ ಬಿಡಿಸುವವನಾ | ಅನಾಥರಿಗೆ

ಪ್ರೀತಿ ತೋರುವವನಾ

ಮಾತಿಗೆ ಮಾತು ಮಾಡುವವನಾ | ಗುರುನಾಥನ

ದೂತ ವಾದಿರಾಜನಾ 1

ಧವಳ ಗಂಗೆಯ ದಿವ್ಯ ಸ್ನಾನ | ಅಲ್ಲಿ ಹೊಳೆಯುವಂಥಾ

ಸಾಲು ಬೃಂದಾವನಾ

ಕೊಳಲ ಕ್ರಿಷ್ಣನ ದರುಶನಾ | ಚಂದದೊಳು

ಅನಂತೇಶ್ವರನ ಸನ್ನಿಧಾನಾ 2

ವಾತಸುತನಿಗೆ ಸಮನೀತ ಅದ್ಭುತ ಖ್ಯಾತ |

ಲೋಕಜನರಿಗೆ ಪ್ರೀತ

ಪ್ರಖ್ಯಾತ ಮಹಿಮ ಯಮರಾಜನ ದೂತ | ಜಗಖ್ಯಾತ

ಗುರುವರನಾ3

ಪಂಚ ಬೃಂದಾವನವ ನೋಡಿ ಮನದ

ಸಂಚಿತಾಗಮ ಈ ಡ್ಯಾಡಿ

ಮುಂಚೆ ನಮಸ್ಕಾರ ಮಾಡಿ | ಪ್ರಪಂಚದಲ್ಲೆ |

ಅಧಿಕ ವಾದಿರಾಜರ ನೋಡಿ4

ಭೂಸುರನಂತ್ಹೊಳಿಯುವದ | ಬಂದು ನೋಡಲು

ಜನಕೆ ಉಲ್ಲಾಸ

ಲೇಸಾದ ಮಹಿಮೆ ಉಳ್ಳವರನಾ | ಸ್ವಾದಿಲ್ವಾಸ

ಮಾಡುವ ವಾದಿರಾಜರ 5

ಚಕ್ರ ಶಂಖª Àಧರಿಸಿದಾ | ನಮ್ಮರುಕ್ಮಿಣಿ ಸಹಿತ ಬಂದು ನಿಂತಿಹ

ಶಕ್ರನಾಗರ್ವಮುರಿದನ | ಅಮಿತ ವಿಕ್ರಮ ಚರಿತ |

ತ್ರಿವಿಕ್ರಮದೇವನಾ6

ಎಂತು ಹೇಳಲಿ ಧ್ವಜಸುತ್ತಿ ಅಲ್ಲಿ | ಸಂತಾನವನು

ಬೇಡುವವರನು | ಬೆನ್ಹತ್ತಿ

ನಿಂತು ಹರಸಿದರು | ಎತ್ತಿ ಅದರಲಿ ಸಂತಾನ

ಬೀಜಗಳನು ಬಿತ್ತುವರು 7

ಚವಕಿ ಮಠದಿ ದಿವ್ಯಪ್ರಸ್ತ | ಓಡಾಡಿ ಬಡಿಸುವ ಜನಗಳ ಸಿಸ್ತಾ

ನಿಂತು ನೋಡಿದೆನು ಪ್ರಶಸ್ತಾ ಅಲ್ಲಿ ಕೂತು ನೋಡುವ

ಯತಿಗಳ ಸಿಸ್ತಾ 8

ಭೋಗತನದ ಫಳಾರ ಅಲ್ಲಿ ಹೋಗಿ ಕುಳಿತು

ಜನರ ಅಲಂಕಾರ

ಕೂತು ನೋಡಿದೆನು ಶೃಂಗಾರ | ಓಡ್ಯಾಡುತಿಹ

ಯತಿಗಳ ಗಂಭೀರಾ 9

ಭೂತಬಲಿಗಳ ನೋಡಿ | ನಮ್ಮ ಭೀತಿ-ಭಯಗಳನ್ನು ಬೀಸಾಡಿ

ಪ್ರೀತಿಲಿ ನಮಸ್ಕಾರ ಮಾಡಿ | ಪ್ರಖ್ಯಾತ ಮಹಿಮೆ

ಭೂತರಾಜನ ನೋಡಿ 10

ರಥದುತ್ಸವ ಅಲಂಕಾರ ಅಲ್ಲಿ | ಅನೇಕ ಜನರಾ

ಪೀಳಿಗೆ ಪೂಜೆ ಚಂದ

ಕಣಕದ್ವಾಲಗವು ಬಹು ಚೆಂದ | ಮನಕೆ ಆಯಿತು

ನೋಡಲು ನಂದ 11

ಮುತ ಕೆತ್ತಿಹ ಕಿರೀಟ | ಬಹು ಚಿತ್ರವಾಗಿಹಗದ್ದುಗೆ ಮಾಟ

ಸುತ್ತ ಜನರು ನಿಂತು ನೋಟ | ಜೀವೋತ್ತಮ

ವಾದಿರಾಜರ ದೊಡ್ಡ ಆಟಾ 12

ಈಕ್ಷಿಸಲಳವೆ ಮಠವಾ ಎನ್ನಕ್ಷಿಗಳಿಂದ ನೋಡಲು

ಸಾಕ್ಷಾತ ವೈಕುಂಠದವನಾ | ನಮ್ಮ ಲಕ್ಷ್ಮೀ ಅರಸಾ

ನರಸಿಂಹ ವಿಠಲನ್ನಾ 13

****


No comments:

Post a Comment