Wednesday, 1 September 2021

ಬಲುದೊಡ್ಡ ಧೊರಿ ದೊರಕಿದೆನಗೊಬ್ಬ ನೋಡಿ ಸಲಹುತಿಹ್ಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಬಲುದೊಡ್ಡ ಧೊರಿ ದೊರಕಿದೆನಗೊಬ್ಬ ನೋಡಿ ಸಲಹುತಿಹ್ಯ ಸಕಲಾರ್ಥ ಸಾರಾಯ ನೀಡಿ ಪ 


ದೊರೆಗಳಾದವರಿಗೆಲ್ಲ ಈತನೆ ದೊರೆಯು ಚರಣಸೇವೆಯಲ್ಲಿಹಳು ಅಖಂಡ ಸಿರಿಯು ಸುರಮುನಿಜನರ ಪಾಲಿಸುತಿಹ್ಯ ಪರೋಪರಿಯು ಸರಿಸಿಜೋದ್ಭವನುತಗಿಲ್ಲ ಸರಿಯು 1 

ಅನಂತಕೋಟಿ ಬ್ರಹ್ಮಾಂಡ ನಾಯಕನೆಂದು ಅನಂತಸಿದ್ಧಿ ವಾಲ್ಗೈಸುತಿಹವು ಅನಂತಗುಣ ಪರಿಪೂರ್ಣ ಶ್ರೀ ಹರಿಯೆಂದು ಅನಂತಶ್ರುತಿ ಸ್ಮøತಿ ಸಾರುತಿಹ್ಯವು 2 

ಅನೆಮೊದಲಿರುವೆÉ ಕಡೆ ಅನುದಿನಾಹಾರವಿತ್ತು ಜನವನವಿಜನದಿ ರಕ್ಷಿಸುತಿಹನು ದೀನ ಮಹಿಪತಿಸ್ವಾಮಿ ಭಾನುಕೋಟಿತೇಜ ತಾನೆ ತಾನಾಗೆನಗೆ ಸಲಹುತಿಹ್ಯನು 3

***


No comments:

Post a Comment