Wednesday, 1 September 2021

ಸಾವಧಾನವಾಗಿ ನೋಡಿ ನಿಜ ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ankita mahipati

 ಸಾವಧಾನವಾಗಿ ನೋಡಿ ನಿಜ ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ಪ  


ಹತ್ತಿಲಿದೆ ತಾ ಸರ್ವಕಾಲ ಚಿತ್ತೊಂದೆ ಮಾಡಿ ನೋಡು ಗುರುಪಾದ ಕಮಲ ನೆತ್ತಿಯೊಳಗದೆ ನಿಶ್ಚಲ ಉತ್ತಮೋತ್ತವಾದ ಸದ್ವಸ್ತು ಅನುಕೂಲ 1 

ಅತ್ತಿತ್ತಲೆ ನೋಡಲಾಗದು ತುಂಬಿ ತುಳುಕುವದು ಸುತ್ತೆ ಸೂಸ್ಯಾಡುತಲಿಹುದು ಮತ್ತೆ ಉನ್ಮನವಾಗಿ ತನ್ನೊಳು ತಾ ನೋಡುವದು2 

ಸಾರವೆ ಅದೆ ಸತ್ಯನೋಡಿ ಮಿಥ್ಯ ಭ್ರಾಂತನೆ ಈಡಾಡಿ ಗುರುಕೃಪೆಯಿಂದ ನಿಜಗೂಡಿ ತರಳ ಮಹಿಪತಿ ಹರುಷಗೈದ ಬೆರೆದಾಡಿ3

***


No comments:

Post a Comment